ಸುಳ್ಯ | ತೆರಿಗೆ ಹಣ ದುರುಪಯೋಗ ಆರೋಪ : ಪಂಜ ಗ್ರಾಪಂ ಸಿಬ್ಬಂದಿ ಅಮಾನತು
Update: 2025-12-05 00:24 IST
ಸುಳ್ಯ, ಡಿ.4: ಪಂಜ ಗ್ರಾಮ ಪಂಚಾಯತ್‌ನ ತೆರಿಗೆ ವಸೂಲಾತಿಯ ಹಣವನ್ನು ಬ್ಯಾಂಕ್‌ಗೆ ಪಾವತಿಸದೇ ದುರುಪಯೋಗ ಮಾಡಿರುವ ಆರೋಪದಲ್ಲಿ ಗ್ರಾಪಂ ಸಿಬ್ಬಂದಿ ಬಾಬು ಎಂಬವರನ್ನು ಗ್ರಾಪಂ ಆಡಳಿತ ಅಮಾನತುಗೊಳಿಸಿದೆ.
ಪಂಚಾಯತ್ ಸಿಬ್ಬಂದಿಯಾಗಿರುವ ಬಾಬು ತಾವು ಸಂಗ್ರಹಿಸಿದ ತೆರಿಗೆ ಹಣವನ್ನು ಬ್ಯಾಂಕ್‌ಗೆ ಪಾವತಿಸದೆ ದುರುಪಯೋಗ ಮಾಡಿದ್ದಾರೆ. ಈ ವಿಚಾರ ಪಂಚಾಯತ್ ಆಡಳಿತ ಹಾಗೂ ಪಿಡಿಒ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಬಾಬುರನ್ನು ವಿಚಾರಿಸಿದಾಗ ಹಣ ದುರುಪಯೋಗ ಮಾಡಿದನ್ನು ಒಪ್ಪಿಕೊಂಡಿದ್ದಾರೆ. ಡಿ.2ರಂದು ಪಂಚಾಯತ್ ಆಡಳಿತ ಬಾಬುರನ್ನು ಅಮಾನತು ಮಾಡಿ ಹಾಗೂ ಹಣ ದುರುಪಯೋಗದ ಕುರಿತು ಪೊಲೀಸ್ ದೂರು ನೀಡಿದ್ದಾರೆ.