ಸುರತ್ಕಲ್: ಕಾಂಗ್ರೆಸ್ ಸಮಿತಿ ವತಿಯಿಂದ ಸೌಹಾರ್ದ, ರಾಜಕೀಯ ವಿಚಾರಗಳ ಕಾರ್ಯಾಗಾರ
ಸುರತ್ಕಲ್ : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಸುರತ್ಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ವತಿಯಿಂದ ಸೌಹಾರ್ದ ಮತ್ತು ರಾಜಕೀಯ ವಿಚಾರಗಳು ಕುರಿತು ವಿಚಾರ ಸಂಕಿರಣವು ರವಿವಾರ ಸುರತ್ಕಲ್ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಹಿಳಾ ಕಾಂಗ್ರೆಸ್ ಯುವ ಕಾಂಗ್ರೆಸ್ ಗಟ್ಟಿಯಾಗಬೇಕು. ಮಹಿಳಾ ಘಟಕ ಗಟ್ಟಿಯಾಗಿದ್ದರೆ ಅಧಿಕಾರ ಶತಸಿದ್ಧ. ಸೌಹಾರ್ದತೆ ಮನೆಯಿಂದಲೇ ಆರಂಭವಾಗಬೇಕು. ನಾನೂ ಎರಡೂ ಪಕ್ಷಗಳಲ್ಲಿದ್ದು ಬಂದಿದ್ದರೂ, ನನ್ನ ಸಮಯದಲ್ಲಿ ಎಲ್ಲೂ ಕೋಮು ಸೌಹಾರ್ದಕ್ಕೆ ದಕ್ಕೆ ಬರಲು ಬಿಟ್ಟಿಲ್ಲ ಎಂದರು.
ಕೆಪಿಸಿಸಿ ಪ್ರಾಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ, ಸಂವಿಧಾನದ ಸಿದ್ದಾಂತಗಳೇ ಕಾಂಗ್ರೆಸ್ ಪಕ್ಷದ ಸಿದ್ದಾಂತ. ಹೊಸ ಮತದಾರರಿಗೆ ಪಕ್ಷದ ಸಿದ್ದಾಂತಗನ್ನು ತಿಳಿಹೇಳಿ ಪಕ್ಷದಲ್ಲಿ ಸೇರಿಸಿಕೊಳ್ಳುವಂತಾಗಬೇಕು. ರಾಜಕೀಯವು ಧರ್ಮ ಒಟ್ಟಾಗಿ ಬೆರೆತರೆ ದೇಶಕ್ಕೆ ಮಾರಕ. ರಾಜಕೀಯಕ್ಕೆ ಧರ್ಮ ಬೆರೆಸಿ ಜನರನ್ನು ಮಂಗ ಮಾಡುತ್ತಾ ಸಂವಿಧಾನಕ್ಕೆ ಕೊಡಲಿ ಏಟು ನೀಡುತ್ತಿದ್ದಾರೆ.
ಮಂಗಳೂರು ಬದ್ರಿಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಇಸ್ಮಾಯಿಲ್ ಎನ್., ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥರಾದ ಪ್ರೊ. ಬಿ. ಶಿವರಾಮ್ ಶೆಟ್ಟಿ, ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಝೇವಿಯರ್ ಡಿಸೋಜ ಅವರು “ಸೌಹಾರ್ದ ಮತ್ತು ರಾಜಕೀಯ” ಉಪನ್ಯಾಸ ನಡೆಸಿಕೊಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ಚಿತ್ರಾಪುರ ವಹಿಸಿ ಮಾತನಾಡಿದರು.
ಮಂಗಳೂರು ನಗರ ಜಿಲ್ಲಾ ಮಹಿಳಾ ಅಧ್ಯಕ್ಷೆ ಅಪ್ಪಿ, ಕೆಪಿಸಿಸಿ ಮಹಿಳಾ ಸಮಿತಿ ಕಾರ್ಯದರ್ಶಿಮಂಜುಳಾ ನಾಯ್ಕ್, ಕೆಪಿಸಿಸಿ ಸದಸ್ಯ ಸದಾಶಿವ ಶೆಟ್ಟಿ, ಮನಪಾ ಮಾಜಿ ಸದಸ್ಯ ಅನಿಲ್ ಕುಮಾರ್, ಸುರತ್ಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಶಕುಂತಲಾ ಕಾಮತ್, ನ್ಯಾಯವಾದಿ ಶೈಲಜಾ ರಾಜೇಶ್, ಕೆಪಿಸಿಸಿ ಸದಸ್ಯೆ ಗೀತಾ, ಪದ್ಮನಾಭ ಅಮೀಲ್, ರವಿ ಶಿಯಾನ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಥ್ವಿರಾಜ್, ಮುಲ್ಕಿ ನಗರ ಕಾಂಗ್ರೆಸ್ ಅಧ್ಯಕ್ಷೆ ವಿಲ್ಮಾ ಮೊದಲಾದವರು ಉಪಸ್ಥಿತರಿದ್ದರು.
ಸುತತ್ಕಲ್ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೆಹಮಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು.