ಭಾರತೀಯ ಸೇನೆಯ ಕಾರ್ಯಾಚರಣೆಗೆ ಅಖಿಲ ಭಾರತ ಬ್ಯಾರಿ ಪರಿಷತ್ ಶ್ಲಾಘನೆ
Update: 2025-05-09 07:13 IST
ಮಂಗಳೂರು : ಜಮ್ಮು-ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತದ ಸೇನೆಯು ಬುಧವಾರ ನಸುಕಿನ ಜಾವ ಪಾಕಿಸ್ತಾನ ಹಾಗೂ ಪಾಕ್ ಅಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ಗುರಿಯಾಗಿಸಿ ನಡೆಸಿದ ದಾಳಿ, ಕಾರ್ಯಾಚರಣೆಗೆ ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಯು.ಎಚ್.ಖಾಲಿದ್ ಉಜಿರೆ ರವರು ಶ್ಲಾಘಿಸಿದ್ದಾರೆ.
ಭಾರತದ ಸೇನೆ ಹಾಗೂ ಭಾರತ ಸರಕಾರದೊಂದಿಗೆ ಮುಸ್ಲಿಂ ಸಮುದಾಯವು ಸದಾ ನಿಲ್ಲುತ್ತದೆ ಎಂದು ಯು.ಎಚ್.ಖಾಲಿದ್ ಉಜಿರೆ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.