×
Ad

ಯುವಕ ನಾಪತ್ತೆ

Update: 2023-10-31 21:51 IST

ಮಂಗಳೂರು, ಅ.31: ನಗರ ಹೊರವಲಯದ ಪ್ರಶಾಂತಿ ನಗರ ಎಂಬಲ್ಲಿನ ಪ್ರಣಾಮ್ (30) ಎಂಬಾತ ನಾಪತ್ತೆಯಾಗಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಕಂಕನಾಡಿ ನಗರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳೆದ ಮೂರು ವರ್ಷದಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದ ಪ್ರಣಾಮ್ ಅ.27ರಂದು ಕಾಣೆಯಾಗಿದ್ದಾನೆ ಎನ್ನಲಾಗಿದೆ. ಸುಮಾರು 5.6 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಸಪೂರ ಶರೀರ, ಕೋಲು ಮುಖ ಹೊಂದಿದ್ದ ಪ್ರಣಾಮ್ ಹೊರಗೆ ಹೋಗುವಾಗ ನಸು ಹಳದಿ ಬಣ್ಣದ ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದ ಎಂದು ಹೇಳಲಾಗಿದೆ.

ಕನ್ನಡ, ತುಳು ಭಾಷೆ ಮಾತನಾಡುವ ಈತನ ಬಗ್ಗೆ ಮಾಹಿತಿ ದೊರೆತವರು ಕಂಕನಾಡಿ ನಗರ ಪೊಲೀಸ್ ಠಾಣೆ (0824-2220529)ಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News