×
Ad

ವಾಹನಗಳ ಬಿಡಿಭಾಗಗಳ ಮಳಿಗೆಯಿಂದ ಸೊತ್ತು ಕಳವು

Update: 2023-08-28 21:57 IST

ಮಂಗಳೂರು, ಆ.28: ನಗರದ ಅಝೀಝುದ್ದಿನ್ ರಸ್ತೆಯಲ್ಲಿರುವ ‘ಜ್ಯೋತಿ ಮೋಟರ್ಸ್’ ಮಳಿಗೆಯಿಂದ ಹಣ ಮತ್ತಿತರ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ಮುಹಮ್ಮದ್ ಮುದಸ್ಸಿರ್ ಎಂಬವರು ಬಂದರು ಠಾಣೆಗೆ ದೂರು ನೀಡಿದ್ದಾರೆ.

ಮುದಸ್ಸಿರ್ ಅವರು ಟಿವಿಎಸ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಬಿಡಿ ಭಾಗಗಳ ದಾಸ್ತಾನು ಹಾಗೂ ವ್ಯಾಪಾರ ಮಳಿಗೆ ಯನ್ನು ಹೊಂದಿದ್ದಾರೆ. ಆ.26ರಂದು ಸಂಜೆ 6:30ಕ್ಕೆ ಮಳಿಗೆಯನ್ನು ಮುಚ್ಚಿ ಹೋಗಿದ್ದು, ಆ.28ರ ಬೆಳಗ್ಗೆ 9ಕ್ಕೆ ಮಳಿಗೆಯನ್ನು ತೆರೆದು ಒಳಗೆ ಹೋದಾಗ ಕೌಂಟರ್ ಡ್ರಾವರ್‌ನ ಬೀಗ ಒಡೆದು 39,370 ರೂ.ವನ್ನು, 4 ಮೊಬೈಲ್ ಫೋನ್ ಮತ್ತದರ ಚಾರ್ಜರ್‌ಗಳು ಹಾಗೂ ಇಂಟರ್‌ನೆಟ್ ಮೋಡೆಮ್ ಕಳವಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಪರಿಶೀಲಿಸಿದಾಗ ಮಳಿಗೆಯ ಎಡಭಾಗದಲ್ಲಿದ್ದ ಬಾಗಿಲಿನ ಪಕ್ಕದ್ದಲ್ಲಿ ತಗಡು ಶೀಟನ್ನು ಕತ್ತರಿಸಿ ತೆಗೆದಿರುವುದು ಕಂಡು ಬಂದಿದೆ. ಅದರ ಮೂಲಕ ಯಾರೋ ಒಳಗೆ ನುಗ್ಗಿ ಬಂದಿರುವುದಾಗಿ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News