×
Ad

ಉಳ್ಳಾಲ: ಓವರ್ ಬ್ರಿಡ್ಜ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2023-08-16 10:26 IST

ಉಳ್ಳಾಲ: ಓವರ್ ಬ್ರಿಡ್ಜ್ ಬಳಿ 110 ಅಡಿ ಎತ್ತರದ ನಿರ್ಮಾಣ ದ ಧ್ವಜ ಸ್ತಂಭ ದಲ್ಲಿ ಧ್ವಜಾರೋಹಣ ವನ್ನು ಉಳ್ಳಾಲ ತಹಶೀಲ್ದಾರ್ ಪ್ರಭಾಕರ್ ತಜೂರೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯ ದಿನಾಚರಣೆ ಆಚರಣೆ ಜತೆ‌ ದೇಶ‌ಕಟ್ಟುವ ಕೆಲಸ ನಾವು ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಪ್ರಯುಕ್ತ ರಾಣಿ ಅಬ್ಬಕ್ಕ ವೃತ್ತದಿಂದ ಓವರ್ ಬ್ರಿಡ್ಜ್ ವರೆಗೆ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ಪಥಸಂಚನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಈ ವೇಳೆ ವೀರ ಯೋಧರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಉಪ ತಹಶೀಲ್ದಾರ್ ನವನೀತ್ ಮಾಳವ, ನಗರ ಕ್ಷೇತ್ರದ ಶಿಕ್ಷಣಾಧಿಕಾರಿ ಈಶ್ವರ್, ಸೋಮೇಶ್ವರ ಮುಖ್ಯಾಧಿಕಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಅಧ್ಯಾಪಕ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಳೆಕೋಟೆ‌‌ ಸಯ್ಯದ್ ಮದನಿ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.

ನಗರ ಸಭೆ ಪೌರಾಯುಕ್ತ ವಾಣಿ ಆಳ್ವ, ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News