×
Ad

ಉಳ್ಳಾಲ: ಮಟ್ಕಾ ಅಡ್ಡೆಗೆ ಪೊಲೀಸ್ ದಾಳಿ; ‌ನಾಲ್ವರ ಬಂಧನ

Update: 2023-11-07 14:24 IST

ಉಳ್ಳಾಲ: ಇಲ್ಲಿನ ಠಾಣಾ ವ್ಯಾಪ್ತಿಯ ಒಳಪೇ ಟೆಯಲ್ಲಿ ನಡೆಯುತ್ತಿದ್ದ ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಉಳ್ಳಾಲ ಇನ್ಸ್ಪೆಕ್ಟರ್ ಬಾಲಕೃಷ್ಣ ನೇತೃತ್ವದ ಪೊಲೀಸರ ತಂಡ ನಾಲ್ವರನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಬಂಧಿತರನ್ನು ಬೆಳ್ಮ ರೆಂಜಾಡಿ ನಿವಾಸಿ ಖಾದರ್ ಮೊಯ್ದಿನ್ (60), ಮೂಲತಃ ಬೆಳಗಾವಿ ನಿವಾಸಿ ಪ್ರಸ್ತುತ ತೊಕ್ಕೋಟ್ಟು ಒಳಪೇಟೆ ಬಳಿ ವಾಸವಿರುವ ಫಕೀರಬ್ಬ, ಮೂಲತಃ ಸಕ್ಲೇಶ್ ಪುರ ನಿವಾಸಿ ಪ್ರಸ್ತುತ ಮಂಜನಾಡಿ ಯಲ್ಲಿ ವಾಸವಿರುವ ಮುಸ್ತಫಾ (52) ಹಾಗೂ ಉಲ್ಳಾಲ ಬೈಲ್ ನಿವಾಸಿ ಮಧುಸೂದನ್(50) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ 3260ರೂ. ನಗದು ಹಾಗೂ ಇತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News