ಉಳ್ಳಾಲ| ರಿಕ್ಷಾ ಕಳ್ಳತನ: ಆರೋಪಿಯ ಬಂಧನ
Update: 2025-12-28 23:06 IST
ಉಳ್ಳಾಲ: ತಾಲೂಕಿನ ಚೋಟಾ ಮಂಗಳೂರು ಭಗವತಿ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಆಟೋ ರಿಕ್ಷಾ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಅಕ್ಕರೆ ಕೆರೆ ನಿವಾಸಿ ಮುಹಮ್ಮದ್ ಶಾಝಿಲ್ (29) ಎಂದು ಗುರುತಿಸಲಾಗಿದೆ. ಈತನನ್ನು ಬಂಧಿಸಿರುವ ಪೊಲೀಸರು ಕಳವುಗೈದ ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.
ಘಟನೆ ವಿವರ: ಚೋಟ ಮಂಗಳೂರು ನಿವಾಸಿ ನರೇಂದ್ರ ಕುಮಾರ್ ಅವರು ತನ್ನ ಆಟೋ ರಿಕ್ಷಾವನ್ನು ತನ್ನ ಮನೆಯ ಕಂಪೌಂಡ್ ನ ಹೊರಗಡೆ ಇರುವ ಭಗವತಿ ರಸ್ತೆಯಲ್ಲಿ ಡಿ.13ರಂದು ರಾತ್ರಿ ನಿಲ್ಲಿಸಿದ್ದರು. ಈ ರಿಕ್ಷಾವು ಕಳವಾಗಿದ್ದು, ಈ ಘಟನೆ ಡಿ.14 ರಂದು ಬೆಳಿಗ್ಗೆ ಬೆಳಕಿಗೆ ಬಂದಿತ್ತು. ಈ ಬಗ್ಗೆ ಅವರು ಉಳ್ಳಾಲ ಠಾಣೆಗೆ ದೂರು ನೀಡಿದ್ದರು.
ಡಿ.19ರಂದು ಈ ಕುರಿತು ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.