ಸುನ್ನತ್ ಜಮಾಅತ್‌ನ ಆಶಯ, ಆದರ್ಶಗಳನ್ನು ಪಾಲಿಸೋಣ: ಜಿಫ್ರಿ ಮುತ್ತುಕೋಯ ತಂಙಳ್
ಮಂಗಳೂರಿನಲ್ಲಿ ಸಮಸ್ತ ಶತಾಬ್ದಿ ಸಂದೇಶ ಯಾತ್ರೆಯ ಸಮಾರೋಪ ಸಮಾರಂಭ
ಮಂಗಳೂರು: ಮುಸ್ಲಿಮರಾದ ನಾವು ಸುನ್ನತ್ ಜಮಾಅತ್‌ನ ಆಶಯ ಮತ್ತು ಆದರ್ಶಗಳನ್ನು ಪಾಲಿಸೋಣ, ಉಲೇಮಾ, ಸಾದಾತುಗಳನ್ನು ಗೌರವಿಸೋಣ. ಇಸ್ಲಾಮಿನ ಪರಂಪರೆಯನ್ನು ಮುಂದುವರಿಸೋಣ ಎಂದು ಸಮಸ್ತ ಅಧ್ಯಕ್ಷರಾದ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಕರೆ ನೀಡಿದರು.
ಸಮಸ್ತ ಕೇಂದ್ರೀಯ ಜಂಇಯ್ಯತುಲ್ ಉಲಮಾದ ಶತಮಾನೋತ್ಸವ ಅಂಗವಾಗಿ ನಗರದ ಅಡ್ಯಾರ್ ಕಣ್ಣೂರಿನ ಮೈದಾನದಲ್ಲಿ ರವಿವಾರ ಆಯೋಜಿಸಲಾದ ಶತಾಬ್ದಿ ಸಂದೇಶ ಯಾತ್ರೆಯ ಸಮಾರೋಪ ಮಹಾ ಸಮ್ಮೇಳನದಲ್ಲಿ ಅವರು ಸಂದೇಶ ಭಾಷಣಗೈದರು.
ಸಾದಾತುಗಳು ಕಷ್ಟಪಟ್ಟು ಸ್ಥಾಪಿಸಿದ ಸಮಸ್ತ ಸಂಘಟನೆಯನ್ನು ಬಲಪಡಿಸಲು ಪ್ರತಿಯೊಬ್ಬ ಕಾರ್ಯಕರ್ತ ಕೂಡ ಶ್ರಮಿಸಬೇಕು. ಸಮಸ್ತದ ಉದ್ದೇಶವನ್ನು ಎಲ್ಲೆಡೆ ಪಸರಿಸಲು ಮುಂದಾಗಬೇಕು ಎಂದು ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್, ಸೌಹಾರ್ದ ಸಮಾಜ ನಿರ್ಮಾಣಕ್ಕೆ ಉಲೇಮಾಗಳ ಮಾರ್ಗದರ್ಶನ ಅತ್ಯಗತ್ಯವಾಗಿದೆ. ಅವರ ಅಶಯ, ಆದರ್ಶದಂತೆ ಮಾರ್ಗದರ್ಶನ ಪಡೆದು ಮುನ್ನಡೆಯೋಣ. ಅದಕ್ಕಾಗಿ ಪ್ರತಿಯೊಬ್ಬರೂ ಕೂಡ ಆಯಾ ಜಮಾಅತ್‌ನ ಖತೀಬ್, ಇಮಾಮರ ಸಲಹೆ ಸೂಚನೆಗಳನ್ನು ಪಾಲಿಸಬೇಕು. ಅದಕ್ಕಾಗಿ ಜಾಗೃತಿ ಮೂಡಿಸಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದ ನೆಲೆಸಲು ಪ್ರತಿಯೊಬ್ಬರು ಮುಂದಾಗಬೇಕು. ಸೌಹಾರ್ದಕ್ಕೆ ಅಡ್ಡಿಯಾಗುವ ಯಾವುದೇ ಕೋಮುವಾದಿ ಶಕ್ತಿಗಳನ್ನು ಮಟ್ಟ ಹಾಕಲು ಕಟಿಬದ್ಧರಾಗಬೇಕು ಎಂದು ಹೇಳಿದರು.
ಸ್ವಾಗತ ಸಮಿತಿಯ ಜಿಲ್ಲಾ ಜನರಲ್ ಕನ್ವೀನರ್ ಹಾಗೂ ಸಮಸ್ತ ಮುಶಾವರ ಸದಸ್ಯ ಅಬ್ದುಲ್ ಖಾದರ್ ಖಾಸಿಮಿ ಬಂಬ್ರಾಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಸ್ತ ವಿದ್ಯಾಭ್ಯಾಸ ಬೋರ್ಡ್‌ನ ವ್ಯವಸ್ಥಾಪಕ ಕೆ. ಮೊಯಿನ್ ಕುಟ್ಟಿ ಮಾಸ್ಟರ್, ಸಮಸ್ತ ಮುಶಾವರ ಸದಸ್ಯ ಉಸ್ಮಾನ್ ಫೈಝಿ ತೋಡಾರ್, ಅಬ್ದುಲ್ ಹಮೀದ್ ಫೈಝಿ ಅಂಬಲಕಡವ್, ಸತ್ತಾರ್ ಪಂದಲ್ಲೂರು, ಸೈಯದ್ ಅಲಿ ತಂಙಳ್ ಕುಂಬೋಳ್, ಸೈಯದ್ ಕುಂಞಿಕೋಯ ತಂಙಳ್ ಕುಂಬೋಳ್, ಸ್ವಲಾಹುದ್ದೀನ್ ಫೈಝಿ ವಲ್ಲಪುಝ, ಎಂ.ಪಿ. ಉಸ್ತಾದ್, ಆದಶ್ಯೇರಿ ಹಂಝ ಮುಸ್ಲಿಯಾರ್, ಪಿ.ಎಂ. ಅಬ್ದುಸ್ಸಲಾಂ ಬಾಖವಿ ವಡಕ್ಕೆಕ್ಕಾಡ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಎಸ್‌ವೈಎಸ್ ದ.ಕ.ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಎಸ್ಕೆಎಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿ, ಮಾಜಿ ಸಚಿವ ರಮಾನಾಥ ರೈ ಮಾತನಾಡಿದರು.
ವೇದಿಕೆಯಲ್ಲಿ ಸೈಯದ್ ಮುಹಮ್ಮದ್ ಕೋಯಾ ತಂಙಳ್ ಜಮಾಲುಲ್ಲೈಲಿ, ಅಬ್ದುಲ್ಲಾ ಫೈಝಿ ಕೊಡಗು, ವಾಕೋಡ್ ಮೊಯ್ದಿನ್ ಕುಟ್ಟಿ ಮುಸ್ಲಿಯಾರ್, ಸೈಯದ್ ಅಹ್ಮದ್ ಪೂಕೋಯ ತಂಙಳ್, ಪಾಣಕ್ಕಾಡ್ ಸಯ್ಯಿದ್ ಸಾಬಿಕಲಿ ಶಿಹಾಬ್ ತಂಙಳ್, ಬಶೀರ್ ಫೈಝಿ ದೇಶಮಂಗಲ, ಝೈನುಲ್ ಆಬಿದೀನ್ ಜಿಫ್ರಿ ತಂಙಳ್, ಸೈಯದ್ ಅಮೀರ್ ತಂಙಳ್ ಕಿನ್ಯ, ಸೈಯದ್ ಅಕ್ರಂ ಅಲಿ ತಂಙಳ್, ಸೈಯದ್ ಹುಸೈನ್ ತಂಙಳ್ ಕುಕ್ಕಾಜೆ, ಸೈಯದ್ ಬಾತಿಷ್ ತಂಙಳ್, ಸೈಯದ್ ಅನಸ್ ತಂಙಳ್, ಸೈಯದ್ ಯಹ್ಯಾ ತಂಙಳ್ ಪೋಳ್ಯ, ಸೈಯದ್ ಪುತ್ತೂರು ತಂಙಳ್, ಸೈಯದ್ ತ್ವಾಹ ಜಿಫ್ರಿ ತಂಙಳ್, ಅಲೈಡ್ ಆ್ಯಂಡ್ ಹೆಲ್ತ್‌ಕೇರ್ ರಾಜ್ಯಾಧ್ಯಕ್ಷ ಯು.ಟಿ. ಇಫ್ತಿಕಾರ್ ಅಲಿ, ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್, ಇಬ್ರಾಹೀಂ ಕೋಡಿಜಾಲ್, ಹಮೀದ್ ಕಣ್ಣೂರು, ಮುಹಮ್ಮದ್ ಹಾಜಿ ಅಶೋಕ್, ಸೀಝರ್ ಹಾಜಿ ಅಡ್ಯಾರ್, ಕೆ.ಕೆ. ಶಾಹುಲ್ ಹಮೀದ್, ಎಂ.ಎಸ್.ಮುಹಮ್ಮದ್, ಹನೀಫ್ ಹಾಜಿ ಗೋಳ್ತಮಜಲು, ಇಸಾಕ್ ಹಾಜಿ ತೋಡಾರ್, ಇಕ್ಬಾಲ್ ಮುಲ್ಕಿ, ಎಸ್.ಬಿ. ದಾರಿಮಿ, ಅನ್ಸಾರ್ ಫೈಝಿ ಬುರ್ಹಾನಿ, ಇಸ್ಮಾಯೀಲ್ ಫೈಝಿ ಕರಾಯ, ಮೂಸಲ್ ಫೈಝಿ ಪಾಟ್ರಕೋಡಿ, ಶರೀಫ್ ಫೈಝಿ ಕಡಬ, ಅಹ್ಮದ್ ದಾರಿಮಿ ಕಂಬಳಬೆಟ್ಟು, ಆದಂ ದಾರಿಮಿ ಕೊಡಾಜೆ, ಸಿದ್ದೀಕ್ ದಾರಿಮಿ ಕಡಬ, ಆದಂ ಕುಂಞಿ ದಾರಿಮಿ, ಅಶ್ರಫ್ ಬಾಖವಿ ಚಾಪಳ್ಳ, ಹೈದರ್ ದಾರಿಮಿ ಕರಾಯ, ಉಮರ್ ದಾರಿಮಿ ಸಾಲ್ಮರ, ಹಮೀದ್ ದಾರಿಮಿ ಸಂಪ್ಯ, ಅಬ್ಬಾಸ್ ಮದನಿ ಗಟ್ಟಮನೆ, ಅಬ್ದುಲ್ ರಹ್ಮಾನ್ ಫೈಝಿ ಪರ್ತಿಪ್ಪಾಡಿ, ಮೂಸಾ ದಾರಿಮಿ ಕಕ್ಕಿಂಜೆ, ಉಮರ್ ಫೈಝಿ ಸಾಲ್ಮರ, ಖಾಸಿಮಿ ದಾರಿಮಿ ಸವಣೂರು, ಇರ್ಶಾದ್ ದಾರಿಮಿ ಮಿತ್ತಬೈಲ್, ಮಜೀದ್ ಹಾಜಿ ಸಾಗರ್, ಎಂ.ಎಚ್. ಮುಹಿಯುದ್ದೀನ್ ಹಾಜಿ, ರಫೀಕ್ ಹಾಜಿ ಕೊಡಾಜೆ, ಶಾಹುಲ್ ಹಮೀದ್ ಮೆಟ್ರೋ, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಅಬೂಬಕರ್ ಹಾಜಿ ಗೋಳ್ತಮಜಲ್, ಇಸ್ಮಾಯೀಲ್ ಹಾಜಿ ಕಲ್ಲಡ್ಕ, ಅಬೂಬಕರ್ ಹಾಜಿ ನಾಟೆಕಲ್, ಅಬೂಬಕರ್ ಹಾಜಿ ಮಂಗಳ, ಮಮ್ಮಾಲಿ ಹಾಜಿ ಬೆಳ್ಳಾರೆ, ಎಲ್.ಟಿ. ರಝಾಕ್ ಹಾಜಿ, ಮುಹಮ್ಮದ್ ಹಾಜಿ ಸಾಗರ್, ಇಬ್ರಾಹೀಂ ಹಾಜಿ ಕತರ್, ನಝೀರ್ ಹಾಜಿ ಗಬ್ಗಲ್, ಇಮ್ತಿಯಾಝ್ ತುಂಬೆ, ಆದಂ ಸಲಾಂ ತುಂಬೆ, ಅಬ್ದುಲ್ ಹಮೀದ್ ಕರಾವಳಿ, ಶರೀಫ್ ದಾರಿಮಿ ಈಶ್ವರ ಮಂಗಲ, ಎಸ್‌ಬಿ ಉಸ್ಮಾನ್ ದಾರಿಮಿ ತಲಕ್ಕಿ, ಕೆಬಿ ಅಬ್ದುಲ್ ಖಾದರ್ ದಾರಿಮಿ ಕೊಡುಂಗಾಯಿ, ಹನೀಫ್ ದಾರಿಮಿ ಸವಣೂರು, ಅಬ್ದುಲ್ ಅಝೀಝ್ ಫೈಝಿ ಪಟ್ಟೋರಿ, ಇಸ್ಮಾಯೀಲ್ ದಾರಿಮಿ ನಾಳ, ಅಬ್ದುಲ್ ರಹ್ಮಾನ್ ಫೈಝಿ ಪಾಲಿಮರ್, ಮಾಹಿನ್ ದಾರಿಮಿ ಪಾತೂರು, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಖಲೀಲ್ ರಹ್ಮಾನ್ ದಾರಿಮಿ, ರಫೀಕ್ ಹುದವಿ ಕೋಲಾರ, ತಾಜುದ್ದೀನ್ ರಹ್ಮಾನಿ, ಇಸ್ಮಾಯೀಲ್ ಯಮಾನಿ, ಅಬೂಸ್ವಾಲಿಹ್ ಫೈಝಿ, ಅಶ್ರಫ್ ಮರೋಡಿ, ಮುಹಮ್ಮದ್ ನವವಿ ಮುಂಡೋಳೆ, ಹಾರಿಸ್ ಕೌಸರಿ, ಜಮಾಲ್ ಕೋಡಪದವು, ತಂಲೀಕ್ ದಾರಿಮಿ ಕೊಡಗು, ಬಾಸಿತ್ ಹಾಜಿ ಕೊಡಗು, ಅಬ್ದುಲ್ ರಶೀದ್ ರಹ್ಮಾನಿ, ಅಬ್ದುಲ್ ರಶೀದ್ ಯಮಾನಿ, ಫಾರೂಕ್ ಫರಂಗಿಪೇಟೆ, ರಮಳಾನ್ ಮಾರಿಪಳ್ಳ, ಬುಖಾರಿ ಕುಂಪನಮಜಲ್, ಖಾದರ್ ಹಾಜಿ ಸೀಗಲ್, ಅಬ್ದುಲ್ ಹಮೀದ್ ಹಾಜಿ ಸುಳ್ಯ, ಅಬ್ದುಲ್ ಲತೀಫ್ ಬೆಂಗಳೂರು, ಸುಹೈಲ್ ಕಂದಕ್, ಸಮಸ್ತ ಮುಶಾವರ ಸದಸ್ಯ ಉಮರ್ ಫೈಝಿ ಮುಕ್ಕಮ್, ಅಲವಿ ಫೈಝಿ ಕೂಳತ್ತೂರು, ಬಶೀರ್ ಫೈಝಿ ಚೇಕೂನ್, ವಳವಣ್ಣ ಉಸ್ತಾದ್, ಅಬ್ದುಲ್ ಸಲಾಂ ದಾರಿಮಿ ಆಲಂಪಾಡಿ, ಅಸ್ಕರಲಿ ಉಸ್ತಾದ್ ಮತ್ತಿತರರು ಉಪಸ್ಥಿತರಿದ್ದರು.
ಉದ್ಯಮಿ ಶಕೀಲ್ ದೇರಳಕಟ್ಟೆ ಎಕ್ಸ್‌ಪೋ ಗೋಲ್ಡನ್ ಟಿಕೆಟನ್ನು ಅನಾವರಣಗೊಳಿಸಿದರು. ಸುಹೈಲ್ ಫೈಝಿ ಕೂರಾಡ್ ಮತ್ತು ಸಂಗಡಿಗರು ಸ್ವಾಗತ ಗಾನ ಹಾಡಿದರು. ಜಿಲ್ಲಾ ಸ್ವಾಗತ ಸಮಿತಿ ಸಂಯೋಜಕರಾದ ಖಾಸಿಂ ದಾರಿಮಿ ಕಿನ್ಯ ಸ್ವಾಗತಿಸಿದರು. ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ ವಂದಿಸಿದರು. ನಿಝಾಮ್ ಅನ್ಸಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.
ಸಮಸ್ತ ಅಧ್ಯಕ್ಷ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ನೇತೃತ್ವದಲ್ಲಿ ಶತಾಬ್ದಿ ಸಂದೇಶ ಯಾತ್ರೆಯು ತಮಿಳುನಾಡಿನ ಕನ್ಯಾಕುಮಾರಿ ನಾಗರಕೋವಿಲ್‌ನಿಂದ ಆರಂಭಗೊಂಡು ತಿರುವನಂತಪುರಂ, ಕೊಲ್ಲಂ, ಪತ್ತನಮ್‌ತಿಟ್ಟ, ಕೋಟಯಂ, ಆಲಪ್ಪುಯ, ಇಡುಕ್ಕಿ, ಎರ್ನಾಕುಳಂ, ತ್ರಿಶ್ಶೂರ್, ತಿರೂರ್, ಮಲಪ್ಪುರಂ, ಪಾಲಕ್ಕಾಡ್, ಗೂಡಲ್ಲೂರು, ವಯನಾಡ್, ಕಣ್ಣೂರು, ಕಾಸರಗೋಡು ಮತ್ತಿತರ ಪ್ರಮುಖ ಕೇಂದ್ರಗಳಲ್ಲಿ ಸಾಗಿ ರವಿವಾರ ಅಡ್ಯಾರ್ ಕಣ್ಣೂರಿನ ಮೈದಾನದಲ್ಲಿ ಸಮಾಪನಗೊಂಡಿತು.
ಯಾತ್ರಾ ನಾಯಕ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್‌ರನ್ನು ಆಮಿಲ, ಖಿದ್ಮ, ವಿಖಾಯ ತಂಡಗಳ ತಲಾ 111 ಸದಸ್ಯರು, ಆಯ್ದ ದಫ್ ಹಾಗೂ ಸ್ಕೌಟ್ ತಂಡ, ನೋಂದಾಯಿತ ಮುಅಲ್ಲಿಂ, ಮುತಅಲ್ಲಿಮರು ಹಾಗೂ ಉಲಮಾ, ಉಮರಾ ನಾಯಕರ ತಂಡವು ಸ್ವಾಗತಿಸಿತು.
ವಿಶೇಷ ತರಬೇತಿ ಪಡೆದ 313 ವಿಖಾಯ ಸ್ವಯಂ ಸೇವಕರ ಸಹಿತ ಸಮಸ್ತ ಕಾರ್ಯಕರ್ತರ ಅವಿರತ ಶ್ರಮ ಗಮನ ಸೆಳೆಯಿತು. ಸಭಾ ಕಾರ್ಯಕ್ರಮಕ್ಕೆ ಮುನ್ನ ಮದ್ರಸ ಅಧ್ಯಾಪಕರ ಸಂಗಮ ನಡೆಯಿತು. ಸಮಸ್ತದ ಸೇವೆ, ಸಾಧನೆಗಳನ್ನು ಪರಿಚಯಿಸುವ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.