×
Ad

ಉಳ್ಳಾಲ: ಸೀರತ್ ಅಭಿಯಾನದ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

Update: 2023-10-02 17:06 IST

ಉಳ್ಳಾಲ: ಮುಹಮ್ಮದ್ (ಸ.ಅ) ಅವರ ಹೆಸರಿನಲ್ಲಿ ನಡೆಯುವ ಸೀರತ್ ಅಭಿಯಾನದ ಪ್ರಯುಕ್ತ ಜಮಾಅತ್ ಇಸ್ಲಾಮೀ ಹಿಂದ್ ಘಟಕ ಉಳ್ಳಾಲ ಮತ್ತು ಉಳ್ಳಾಲ ನಗರಸಭೆಯ ಜಂಟಿ ಸಹಭಾಗಿತ್ವದಲ್ಲಿ ಊರ ಮಹನೀಯರ ನೆರವಿನೊಂದಿಗೆ ಬಬ್ಬುಕಟ್ಟೆ ಪರಿಸರದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ಮೌಲಾನಾ ಫರ್ಹಾನ್ ನದ್ವಿ ಸ್ವಚ್ಚತಾ ಕಾರ್ಯಕ್ರಮ ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು ಸ್ವಚ್ಚತೆಯು ಇಸ್ಲಾಮಿನ ಅಂಗವಾಗಿದೆ ಎಂದರು.

ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಘಟಕದ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಮ್ ಪ್ರಾಸ್ತವಿಕವಾಗಿ ಮಾತನಾಡಿದರು. ಉಳ್ಳಾಲ ನಗರ ಸಭೆ ಸದಸ್ಯ ಮುಸ್ತಾಕ್ ಪಟ್ಲ, ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಘಟಕದ ಉಪಾಧ್ಯಕ್ಷ ಇಲ್ಯಾಸ್ ಇಸ್ಮಾಯಿಲ್, ಕಾರ್ಯದರ್ಶಿ ಮೊಹಮ್ಮದ್ ಮುಬೀನ್, ಮಾಜಿ ಸ್ಥಾನೀಯ ಅಧ್ಯಕ್ಷ ಮೊಹಮ್ಮದ್ ಅನ್ವರ್ ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ಎಲ್ಲಾ ವಿಭಾಗದ ಕಾರ್ಯಕರ್ತರು, ನಗರಸಭೆ ಸ್ವಚ್ಚತಾ ಸಿಬ್ಬಂದಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News