×
Ad

ಉಳ್ಳಾಲ: ಯುನಿವೆಫ್ ನಿಂದ ಸೀರತ್ ಸಮಾವೇಶ

Update: 2024-10-24 13:27 IST

ಮಂಗಳೂರು: ಯುನಿವೆಫ್ ಕರ್ನಾಟಕದ ವತಿಯಿಂದ 2024 ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20 ವರೆಗೆ  ನಡೆಯಲಿರುವ "ಮಾನವ ಸ್ವಾತಂತ್ರ್ಯ, ಕಲ್ಯಾಣ ಮತ್ತು ಪ್ರವಾದಿ ಮುಹಮ್ಮದ್ (ಸ)" ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ "ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನದ ಅಂಗವಾಗಿ 25 ಅಕ್ಟೋಬರ್ 2024 ರ ಶುಕ್ರವಾರದಂದು ಉಳ್ಳಾಲ ನಗರಸಭೆ ಮೈದಾನದಲ್ಲಿ ಸಂಜೆ 7 ಗಂಟೆಗೆ ಸೀರತ್ ಸಮಾವೇಶ ಜರುಗಲಿದೆ.

ಈ ಕಾರ್ಯಕ್ರಮದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರು "ಕುಟುಂಬ ಸಂಬಂಧ, ಪರಲೋಕ ಜೀವನ ಮತ್ತು ಪ್ರವಾದಿ ಮುಹಮ್ಮದ್ (ಸ)" ಎಂಬ ವಿಷಯದಲ್ಲಿ ಮುಖ್ಯ ಭಾಷಣ ಮಾಡಲಿರುವರು. ಉಳ್ಳಾಲದ ಉದ್ಯಮಿ ಜನಾಬ್ ಯು. ಕೆ. ಸಿದ್ದೀಕ್ ಅತಿಥಿಯಾಗಿ ಭಾಗವಹಿಸಲಿರುವರು.

ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶ ಮಾಡಲಾಗಿದೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News