×
Ad

ಉಪ್ಪಿನಂಗಡಿ: ಕಾಡಾನೆ ದಾಳಿಗೆ ಕೃಷಿ ನಾಶ

Update: 2023-11-10 22:52 IST

ಉಪ್ಪಿನಂಗಡಿ: ಕೌಕ್ರಾಡಿ ಗ್ರಾಮದ ಬಾಣಜಾಲು ನಿವಾಸಿ ದೇವದಾಸ್ ಬಾಣಜಾಲು ಎಂಬವರ ಭತ್ತದ ಗದ್ದೆಗೆ ಕಾಡಾನೆಗಳು ಲಗ್ಗೆ ಇಟ್ಟಿದ್ದು, ಭತ್ತದ ಕೃಷಿ ನಾಶವಾಗಿದೆ.

ಕಳೆದ ಮೂರು ದಿನದಿಂದ ಕಾಡಾನೆಗಳು ಇವರ ಭತ್ತದ ಕೃಷಿಗೆ ದಾಳಿ ಮಾಡುತ್ತಿದ್ದು, ಕೃಷಿಯು ಸಂಪೂರ್ಣ ಹಾನಿ ಉಂಟಾ ಗಿದೆ. ಅಲ್ಲದೆ ಕೃಷಿ ನೀರಾವರಿಗಾಗಿ ಅಳವಡಿಸಿದ ಪೈಪುಗಳು, ಪಂಪ್ ಶೆಡ್‍ಗಳನ್ನು ಧ್ವಂಸ ಮಾಡಿ ಅಪಾರ ನಷ್ಟ ಉಂಟಾ ಗಿದೆ. ಕೃಷಿಕರಿಗೆ ಕಾಡಾನೆಗಳ ಹಾವಳಿಯಿಂದಾಗಿ ಭಯದಲ್ಲಿ ಬದುಕು ನಡೆಸುವಂತಾಗಿದೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ನಷ್ಟ ಪರಿಹಾರ ಒದಗಿಸುವ ಬಗ್ಗೆ ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News