×
Ad

ಉಪ್ಪಿನಂಗಡಿ: ಬಾವಿಗೆ ಬಿದ್ದು ವೃದ್ಧೆ ಮೃತ್ಯು

Update: 2024-07-27 14:35 IST

ಉಪ್ಪಿನಂಗಡಿ: ವೃದ್ಧೆಯೋರ್ವರು ಆಕಸ್ಮಿಕವಾಗಿ ಆವರಣ ಗೋಡೆಯಿಲ್ಲದ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಇಲ್ಲಿನ ನೂಜಿ ಎಂಬಲ್ಲಿ ಶುಕ್ರವಾರ ನಡೆದಿದೆ.

ಹೊನ್ನಮ್ಮ (65) ಮೃತ ವೃದ್ಧೆ. ಇವರು ಜು.26ರಂದು ಸಂಜೆ ಕಾಣೆಯಾಗಿದ್ದು, ಮನೆಯವರು ಇವರನ್ನು ಹುಡುಕಾಡಿದಾಗ ಇವರ ಮನೆಯ ಆವರಣ ಗೋಡೆಯಿಲ್ಲದ ಬಾವಿಯ ಬಳಿ ಇವರ ಕೊಡೆ ಪತ್ತೆಯಾಗಿತ್ತು. ಇವರ ಮೃತದೇಹ ಬಾವಿಯಲ್ಲಿ ತೇಲುತ್ತಿತ್ತು ಎಂದು ತಿಳಿದು ಬಂದಿದೆ.

ಬಾವಿಯಲ್ಲಿ ನೀರು ಎಷ್ಟಾಗಿದೆ ಎಂಬ ಕುತೂಹಲದಿಂದ ಬಾವಿ ಕಡೆ ಹೋಗಿ ಇಣುಕುವ ಹವ್ಯಾಸ ಇವರಲ್ಲಿದ್ದು, ಅದೇ ಕುತೂಹಲದಿಂದ ನಿನ್ನೆಯೂ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಇವರು ಬಾವಿಗೆ ಇಣುಕಿ ನೋಡಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

 ಮೃತದೇಹವನ್ನು ಅಡೆಕ್ಕಲ್ ಸಂತು ಹಾಗೂ ಸ್ಥಳೀಯ ಯುವಕರು ಬಂದು ಮೇಲೆತ್ತಿದ್ದಾರೆ.

ಘಟನೆಯ ಬಗ್ಗೆ ಮೃತರ ಪುತ್ರ ಉಮೇಶ್ ಮುಗೇರ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News