×
Ad

ಮಂಗಳೂರು | ನ. 22ರಂದು ಬ್ಯಾರೀಸ್‌ನಲ್ಲಿ ʼಉತ್ಕರ್ಷ್ 2025ʼ ಪ್ರತಿಭಾ ಉತ್ಸವ

Update: 2025-11-20 23:05 IST

ಮಂಗಳೂರು: ಬ್ಯಾರೀಸ್ ಸಂಸ್ಥೆಗಳ ಸಮೂಹವು ನ. 22ರಂದು ಎಸ್ಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಂತರ್ ಸಂಸ್ಥೆಗಳ ಪ್ರತಿಭಾ ಉತ್ಸವ ʼಉತ್ಕರ್ಷ್ 2025ʼ ಕಾರ್ಯಕ್ರಮ ಆಯೋಜಿಸಿದೆ. ಮಂಗಳೂರು ವಿಶ್ವವಿದ್ಯಾಲಯದ ಸಮೀಪದ ಬೋಳಿಯಾರ್‌ನ ಲ್ಯಾಂಡ್ಸ್ ಎಂಡ್‌ನಲ್ಲಿರುವ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಡಿಜಿಟಲ್ ಮಾಧ್ಯಮ ಇತ್ಯಾದಿ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಹಲವು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಗಳಿಗೆ ಪ್ರವೇಶ ಉಚಿತವಾಗಿದ್ದು, ವಿಜೇತರಿಗೆ ಒಟ್ಟು 1 ಲಕ್ಷ ರೂ. ಮೌಲ್ಯದ ನಗದು ಬಹುಮಾನಗಳನ್ನು ನೀಡಲಾಗುತ್ತದೆ.

ಸ್ಟಿಲ್ಲ್/ವರ್ಕಿಂಗ್ ಮಾಡೆಲ್, ಎಕ್ಸ್‌ಪ್ಲೋರ್ AI (ಪಿಯುಸಿ ವಿದ್ಯಾರ್ಥಿಗಳಿಗೆ), ಲಿಟ್‌ಮೈಂಡ್ಸ್ ಅಡ್ವೆಂಚರ್ (ಟ್ರೆಷರ್ ಹಂಟ್), ಸೈನ್ಸ್ ರಂಗೋಲಿ, ಬ್ರೈನ್ ಬಝ್ (ಕ್ವಿಜ್), ರೀಲ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ವಿದ್ಯಾರ್ಥಿಗಳಿಗೆ ಭಾಗವಹಿಸಲು ಅನುಕೂಲವಾಗುವಂತೆ ಕಾಸರಗೋಡು, ಮಂಜೇಶ್ವರ, ತಲಪಾಡಿ, ಪಂಪ್‌ವೆಲ್, ತೊಕ್ಕೊಟ್ಟು, ದೇರಳಕಟ್ಟೆ, ಬಿ.ಸಿ.ರೋಡ್, ಮೆಲ್ಕಾರ್, ಮುಡಿಪು, ಉಪ್ಪಿನಂಗಡಿ, ಮಾಣಿ, ಪುತ್ತೂರು, ವಿಟ್ಲದಿಂದ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಭಾಗವಹಿಸುವ ವಿದ್ಯಾರ್ಥಿಗಳು ಬೆಳಿಗ್ಗೆ 9 ಗಂಟೆಗೆ ಕಡ್ಡಾಯವಾಗಿ ಹಾಜರಿರಬೇಕು ಎಂದು ಆಯೋಜಕರು ತಿಳಿಸಿದ್ದಾರೆ.

ಕಾರ್ಯಕ್ರಮದ ಆಯೋಜನಾ ಸಮಿತಿಯಲ್ಲಿ ಡಾ. ಎಸ್.ಐ. ಮಂಜುರ್ ಬಾಷಾ (ಪ್ರಾಂಶುಪಾಲರು, BIT), ಡಾ. ಅಝೀಝ್ ಮುಸ್ತಫಾ (ಪ್ರಾಂಶುಪಾಲರು,BIES), ಆರ್ಕಿಟೆಕ್ಟರ್ ಖಲೀಲ್ ರಝಾಕ್ ಶೇಖ್ (ಪ್ರಾಂಶುಪಾಲರು, BEADS), ಬಿ.ಕೆ. ಅಬ್ದುಲ್ ಲತೀಫ್ (ಪ್ರಾಂಶುಪಾಲರು, BIPUC), ಪ್ರೊ. ಪೃಥ್ವಿರಾಜ್ ಎಂ (ನಿರ್ದೇಶಕರು, BITP) ಹಾಗೂ ಸಿಬ್ಬಂದಿ ಸಂಯೋಜಕಿ ಪ್ರಫುಲ್ಲಾ ಇದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕ 99000 66888 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News