×
Ad

ಚಾರ್ಮಾಡಿ ಘಾಟಿಯಲ್ಲಿ ಕಾಣಿಸಿಕೊಂಡ ಕಾಡಾನೆ: ವಾಹನ ಸಂಚಾರ ಅಸ್ತವ್ಯಸ್ತ

Update: 2026-01-10 09:30 IST

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ 2ನೇ ಹಾಗೂ 3ನೇ ತಿರುವಿನ ಮಧ್ಯೆ ಶುಕ್ರವಾರ ರಾತ್ರಿ ರಸ್ತೆ ಮೇಲೆ ಕಾಡಾನೆ ಕಾಣಿಸಿಕೊಂಡ ಪರಿಣಾಮ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ರಾತ್ರಿ 9.45ರ ಸುಮಾರಿಗೆ ಕಾಡಾನೆ ಮರವನ್ನು ಮುರಿದು ರಸ್ತೆ ಮಧ್ಯೆ ನಿಂತು ತಿನ್ನುತ್ತಿದ್ದುದರಿಂದ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಈ ವೇಳೆ ವಾಹನ ಸವಾರರು ಕಾಡಾನೆಯನ್ನು ಅಟ್ಟಲು ಪ್ರಯತ್ನಿಸಿದರೂ ಅದು ಸ್ಥಳದಿಂದ ಕದಲದೇ ನಿಂತಿತ್ತು‌ ಎನ್ನಲಾಗಿದೆ. 

ಕಾಡಾನೆ ಕಂಡು ಬಂದ ಸ್ಥಳದಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದ ಕಾರಣ, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲು ಸ್ಥಳದಲ್ಲಿದ್ದವರು ಪರದಾಡಬೇಕಾಯಿತು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News