×
Ad

ಉಪ್ಪಳ | ಕಾರು - ಲಾರಿ ಮುಖಾಮುಖಿ ಢಿಕ್ಕಿ; ಮಹಿಳೆ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

Update: 2025-05-30 21:27 IST

ಕಾಸರಗೋಡು: ಕಾರು ಮತ್ತು ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಶುಕ್ರವಾರ ರಾಷ್ಟ್ರೀಯ ಹೆದ್ದಾರಿಯ ಉಪ್ಪಳ ಗೇಟ್ ಬಳಿ ನಡೆದಿದೆ.

ಮಂಗಳೂರು ನಿವಾಸಿ ಪದ್ಮನಾಭ ರವರ ಪತ್ನಿ ನವ್ಯಾ ( 30) ಮೃತಪಟ್ಟವರು. ಪದ್ಮನಾಭ ಹಾಗೂ ಜೊತೆಗಿದ್ದ ಪುತ್ರ ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ .

ಉಪ್ಪಳದ ಸಂಬಂಧಿಕರ ಮನೆಗೆ ಬಂದು ಮಂಗಳೂರಿಗೆ ತೆರಳುತ್ತಿದ್ದ ಕಾರು ಮತ್ತು ಎದುರಿನಿಂದ ಬರುತ್ತಿದ್ದ ಲಾರಿ ನಡುವೆ ಮುಖಾಮುಖಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.

ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News