×
Ad

ದಿಲ್ಲಿ | 11 ವರ್ಷದ ಬಾಲಕಿಯ ಮೇಲೆ ತರಗತಿಯ ಕೊಠಡಿಯಲ್ಲೇ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ

Update: 2024-09-06 22:19 IST

Photo Credit: iStock 

ಹೊಸದಿಲ್ಲಿ : 11 ವರ್ಷದ ವಿದ್ಯಾರ್ಥಿನಿಯ ಮೇಲೆ ತರಗತಿಯ ಕೊಠಡಿಯಲ್ಲೇ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ಶುಕ್ರವಾರ ಹೊರ ದಿಲ್ಲಿಯ ಸುಲ್ತಾನ್ ಪುರಿ ಪ್ರದೇಶದಲ್ಲಿ ನಡೆದಿದ್ದು, ಈ ಘಟನೆಯ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಠಾಣೆಯ ಎದುರು ಜಮಾಯಿಸಿದ ಸಂತ್ರಸ್ತ ಬಾಲಕಿಯ ಪೋಷಕರು ಹಾಗೂ ನೆರೆಹೊರೆಯವರು, ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಂತ್ರಸ್ತೆಯ ತಂದೆಯ ಪ್ರಕಾರ, ತರಗತಿಯ ಸಂದರ್ಭದಲ್ಲಿ ಕ್ರೀಡಾ ಶಿಕ್ಷಕರು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರು ಹಾಗೂ ತಮ್ಮ ಕೃತ್ಯದ ಸಂದರ್ಭದಲ್ಲಿ ತನಗೆ ಬೆದರಿಕೆ ಒಡ್ಡಿದರು ಎಂದು ತಮ್ಮ ಪುತ್ರಿ ಮಧ್ಯಾಹ್ನ ಕರೆ ಮಾಡಿ ತಿಳಿಸಿದಳು ಎಂದು ಹೇಳಿದ್ದಾರೆ.

ಈ ವಿಷಯದ ಕುರಿತು ಶಾಲಾ ಪ್ರಾಂಶುಪಾಲರನ್ನು ಸಂಪರ್ಕಿಸಲಾಗಿದ್ದು, ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಮುಂದಿನ ತನಿಖೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News