×
Ad

ಈಡಿಯಿಂದ ಅನಿಲ್ ಅಂಬಾನಿ ಕಂಪೆನಿಗಳಿಗೆ ಸೇರಿದ 1,120 ಕೋಟಿ ರೂ. ಸೊತ್ತು ಮುಟ್ಟುಗೋಲು

Update: 2025-12-05 21:31 IST

ಅನಿಲ್ ಅಂಬಾನಿ | Photo Credit : PTI 

ಹೊಸದಿಲ್ಲಿ, ಡಿ. 5: ರಿಲಾಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (ಆರ್‌ಎಚ್‌ಎಫ್‌ಎಲ್), ರಿಲಾಯನ್ಸ್ ಕಮರ್ಶಿಯಲ್ ಫೈನಾನ್ಸ್ ಲಿಮಿಟೆಡ್ (ಆರ್‌ಸಿಎಫ್‌ಎಲ್) ಹಾಗೂ ಯೆಸ್ ಬ್ಯಾಂಕ್ ಭಾಗಿಯಾಗಿರುವ ಬ್ಯಾಂಕ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿ ರಿಲಾಯನ್ಸ್ ಅನಿಲ್ ಅಂಬಾನಿ ಸಮೂಹದ ಸಂಸ್ಥೆಗಳಿಗೆ ಸೇರಿದ 1,120 ಕೋಟಿರೂ. ಮೌಲ್ಯದ ಸೊತ್ತುಗಳನ್ನು ಜಾರಿ ನಿರ್ದೇಶನಾಲಯ (ಈಡಿ) ಮುಟ್ಟುಗೋಲು ಹಾಕಿಕೊಂಡಿದೆ.

ಮುಟ್ಟುಗೋಲು ಹಾಕಿಕೊಳ್ಳಲಾದ ಸೊತ್ತುಗಳಲ್ಲಿ 18 ಆಸ್ತಿ, ಸ್ಥಿರ ಠೇವಣಿ, ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಬಹಿರಂಗಪಡಿಸದ ಹೂಡಿಕೆಗಳು ಸೇರಿವೆ. ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳಲ್ಲಿ ರಿಲಾಯನ್ಸ್ ಇನ್‌ಫ್ರಾಸ್ಟ್ರಕ್ಟರ್ ಲಿಮಿಟೆಡ್‌ ನ 7 ಆಸ್ತಿ, ರಿಲಾಯನ್ಸ್ ಪವರ್ ಲಿಮಿಟೆಡ್‌ನ 2 ಆಸ್ತಿ, ರಿಲಾಯನ್ಸ್ ವ್ಯಾಲ್ಯು ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ನ ಮಾಲಕತ್ವದ 9 ಆಸ್ತಿಗಳು ಸೇರಿವೆ.

ಇದಲ್ಲದೆ, ರಿಲಾಯನ್ಸ್ ವ್ಯಾಲ್ಯೂ ಸರ್ವೀಸ್ ಪ್ರೈವೇಟ್ ಲಿಮಿಟೆಡ್, ರಿಲಾಯನ್ಸ್ ವೆಂಚರ್ ಎಸೆಟ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್, ಫಿ ಮ್ಯಾನೇಜ್‌ಮೆಂಟ್ ಸೊಲ್ಯುಷನ್ ಪ್ರೈವೇಟ್ ಲಿಮಿಟೆಡ್, ಆಧಾರ್ ಪ್ರಾಪರ್ಟಿ ಕನ್ಸೆಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್ ಹಾಗೂ ಗಮೇಶಾ ಇನ್ವೆಸ್ಟ್‌ಮೆಂಟ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ ಗೆ ಸಂಬಂಧಿಸಿದ ಸ್ಥಿರ ಠೇವಣಿ ಹಾಗೂ ಹೂಡಿಕೆಗಳನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

ಇದಕ್ಕಿಂತ ಮುನ್ನ ಜಾರಿ ನಿರ್ದೇಶನಾಲಯ ರಿಲಾಯನ್ಸ್ ಕಮ್ಯೂನಿಕೇಷನ್ ಲಿಮಿಟೆಡ್ ಹಾಗೂ ಆರ್‌ಸಿಎಫ್‌ಎಲ್ ಹಾಗೂ ಆರ್‌ಎಚ್‌ಎಫ್‌ಎಲ್‌ಗೆ ಸಂಬಂಧಿಸಿದ ಹಿಂದಿನ ವಂಚನೆ ಪ್ರಕರಣಗಳಲ್ಲಿ 8,997 ಕೋಟಿ. ರೂ. ಮೌಲ್ಯದ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇತ್ತೀಚೆಗೆ ಮುಟ್ಟುಗೋಲು ಸೇರಿದಂತೆ ಅನಿಲ್‌ಅಂಬಾನಿ ಸಮೂಹದ ವಿರುದ್ಧದ ಮುಟ್ಟುಗೋಲು ಹಾಕಲಾದ ಸೊತ್ತಿನ ಒಟ್ಟು ಮೌಲ್ಯ 10,117 ಕೋಟಿ ರೂ. ಆರ್‌ಕಾಮ್, ಆರ್‌ಎಚ್‌ಎಫ್‌ಎಲ್, ಆರ್‌ಸಿಎಫ್‌ಎಲ್, ರಿಲಾಯನ್ಸ್ ಇನ್‌ಫ್ರಾಸ್ಟ್ರಕ್ಟರ್ ಲಿಮಿಟೆಡ್ ಹಾಗೂ ರಿಲಾಯನ್ಸ್ ಪವರ್ ಲಿಮಿಟೆಡ್ ಸೇರಿದಂತೆ ರಿಲಾಯನ್ಸ್ ಎಡಿಎ ಸಮೂಹದ ಹಲವು ಕಂಪೆನಿಗಳು ಸಾರ್ವಜನಿಕರ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿರುವುದನ್ನು ತನಿಖೆ ಬಹಿರಂಗಪಡಿಸಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News