ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಗಡಿಗಳ ಭದ್ರತೆಯನ್ನು ಬಿಗಿಗೊಳಿಸಲು ಎಐ, ಜಿಐಎಸ್ ಚಾಲಿತ ಕಮಾಂಡ್ ಸೆಂಟರ್ ಗೆ ಬಿಎಸ್ಎಫ್ ಚಾಲನೆ
ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗಿನ ದೇಶದ ಗಡಿಗಳನ್ನು ರಕ್ಷಿಸುವ ಭದ್ರತಾ ಪಡೆಗಳ ಸಾಮರ್ಥ್ಯವನ್ನು ಸುಧಾರಿಸಲು ಸೋಮವಾರ ಗಡಿ ಭದ್ರತಾ ಪಡೆಯು ತನ್ನ ಮುಖ್ಯ ಕಚೇರಿಯಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಭೌಗೋಳಿಕ ಮಾಹಿತಿ ವ್ಯವಸ್ಥೆ ಚಾಲಿತ ಸೌಲಭ್ಯಗಳುಳ್ಳ ನೂತನ ಕಮಾಂಡ್ ಮತ್ತು ನಿಯಂತ್ರಣ ವ್ಯವಸ್ಥೆಗೆ ಚಾಲನೆ ನೀಡಿತು.
ಈ ಕೇಂದ್ರವನ್ನು ಗಡಿ ಭದ್ರತಾ ಪಡೆಯ ಮಹಾ ನಿರ್ದೇಶಕ ದಲ್ಜಿತ್ ಸಿಂಗ್ ಚೌಧರಿ ಉದ್ಘಾಟಿಸಿದರು.
ಈ ಕೇಂದ್ರಕ್ಕೆ ನಿರ್ಣಯ ನೆರವು ವ್ಯವಸ್ಥೆ (Decision Support System) ಎಂದು ಹೆಸರಿಸಲಾಗಿದ್ದು, ಈ ಕೇಂದ್ರವು ಎಲ್ಲ ಹಂತದ ಕಮಾಂಡರ್ ಗಳ ನಿರ್ಣಯ ಕೈಗೊಳ್ಳುವ ಸಾಮರ್ಥ್ಯವನ್ನು ವೃದ್ಧಿಸಲಿದೆ.
“ತಂತ್ರಜ್ಞಾನ ಪರಿಹಾರಗಳನ್ನು ಸಜ್ಜುಗೊಳಿಸುವ ಮೂಲಕ, ಭವಿಷ್ಯದಲ್ಲಿ ಉದ್ಭವಿಸುವ ಗಡಿ ಭದ್ರತಾ ಅಪಾಯಗಳನ್ನು ಎದುರಿಸಲು ಗಡಿ ಭದ್ರತಾ ಪಡೆಗೆ ಸಾಧ್ಯವಾಗಲಿದೆ” ಎಂದು ಗಡಿ ಭದ್ರತಾ ಪಡೆ ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ ಹೇಳಲಾಗಿದೆ.