ಆರೋಗ್ಯದಲ್ಲಿ ಏರುಪೇರು: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಆಸ್ಪತ್ರೆಗೆ ದಾಖಲು
Update: 2026-01-12 22:50 IST
ಮಾಜಿ ಉಪರಾಷ್ಟ್ರಪತಿ ಜಗದೀಪ ಧನ್ಕರ್ | Photo Credit : PTI
ಹೊಸದಿಲ್ಲಿ, ಜ.12: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಸೋಮವಾರ ಅವರನ್ನು ಇಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ಮನೆಯಲ್ಲಿನ ವಾಷ್‌ರೂಮ್‌ಗೆ ತೆರಳಿದ್ದ ವೇಳೆ ಧನ್ಕರ್ ಅವರು ಎರಡು ಸಲ ಪ್ರಜ್ಞಾಹೀನರಾಗಿದ್ದರು. ಇಂದು ಅವರು ತಪಾಸಣೆಗೆ ಏಮ್ಸ್‌ಗೆ ತೆರಳಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚಿಸಿದ್ದರು ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಆಸ್ಪತ್ರೆಗೆ ದಾಖಲಾಗಿರುವ ಕುರಿತು ಧನ್ಕರ್ ಅಥವಾ ಅವರ ಕುಟುಂಬವು ಅಧಿಕೃತವಾಗಿ ಇನ್ನೂ ದೃಢಪಡಿಸಿಲ್ಲ. ಧನ್ಕರ್ ಅವರು ಹಿಂದೆ ಉಪರಾಷ್ಟ್ರಪತಿಯಾಗಿದ್ದಾಗ ಹಲವಾರು ಸಂದರ್ಭಗಳಲ್ಲಿ ಬವಳಿಗೆ ಒಳಗಾಗಿದ್ದರು.
ಧನ್ಕರ್ ಅವರು ಆರೋಗ್ಯ ಕಾರಣವನ್ನು ಉಲ್ಲೇಖಿಸಿ ಕಳೆದ ವರ್ಷದ ಜು.21ರಂದು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.