×
Ad

‘ದೋಷಪೂರಿತ’ SIR ಬಗ್ಗೆ ಸಿಇಸಿಗೆ ಮಮತಾ ಐದನೇ ಪತ್ರ

Update: 2026-01-12 23:00 IST

ಮಮತಾ ಬ್ಯಾನರ್ಜಿ | Photo Credit : PTI 

ಕೋಲ್ಕತಾ, ಜ.12: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ನಡೆಯುತ್ತಿರುವ ವಿವಾದಾತ್ಮಕ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರಿಗೆ ಸೋಮವಾರ ಐದನೇ ಪತ್ರ ಬರೆದಿದ್ದಾರೆ.

ಎಸ್‌ಐಆರ್ ಪ್ರಕ್ರಿಯೆ ‘ಮೂಲಭೂತವಾಗಿ ದೋಷಪೂರಿತವಾಗಿದೆ’ ಎಂದು ಪತ್ರದಲ್ಲಿ ಟೀಕಿಸಿರುವ ಮಮತಾ, 2002ರ ಮತದಾರರ ಪಟ್ಟಿಗಳ Ai - ಆಧಾರಿತ ಡಿಜಿಟಲೀಕರಣವು ದೊಡ್ಡ ಮಟ್ಟದಲ್ಲಿ ದತ್ತಾಂಶಗಳು ತಾಳೆಯಾಗದಿರುವುದಕ್ಕೆ ಹಾಗೂ ನಿಜವಾದ ಮತದಾರರನ್ನು ತಪ್ಪಾಗಿ ‘ತಾರ್ಕಿಕ ವ್ಯತ್ಯಾಸ’ಗಳ ವರ್ಗದಲ್ಲಿ ಸೇರಿಸಲು ಕಾರಣವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಚುನಾವಣಾ ಆಯೋಗವು ಕಳೆದ ಎರಡು ದಶಕಗಳಲ್ಲಿ ಅನುಸರಿಸಿದ್ದ ತನ್ನದೇ ಆದ ಶಾಸನಬದ್ಧ ಪ್ರಕ್ರಿಯೆಗಳನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿರುವ ಅವರು, ಅರೆ-ನ್ಯಾಯಾಂಗ ವಿಚಾರಣೆಗಳ ಬಳಿಕ ಈಗಾಗಲೇ ತಿದ್ದುಪಡಿಗಳನ್ನು ಮಾಡಲಾಗಿದ್ದರೂ ತಮ್ಮ ಗುರುತನ್ನು ಮರುಸಾಬೀತುಪಡಿಸುವಂತೆ ಮತದಾರರನ್ನು ಬಲವಂತಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಇಂತಹ ಧೋರಣೆ ನಿರಂಕುಶ, ಅತಾರ್ಕಿಕ ಹಾಗೂ ಭಾರತದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಎಸ್‌ಐಆರ್ ಸಂದರ್ಭದಲ್ಲಿ ಮತದಾರರು ಸಲ್ಲಿಸುವ ದಾಖಲೆಗಳಿಗೆ ಸೂಕ್ತ ಸ್ವೀಕೃತಿ ಪತ್ರಗಳನ್ನೂ ನೀಡಲಾಗುತ್ತಿಲ್ಲ ಎಂದು ಪತ್ರದಲ್ಲಿ ಆರೋಪಿಸಿರುವ ಮಮತಾ, ಇಡೀ ಪ್ರಕ್ರಿಯೆಯೇ ಮೂಲಭೂತವಾಗಿ ದೋಷಪೂರಿತವಾಗಿದೆ ಎಂದು ಕಿಡಿಕಾರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News