ಮತ್ತೆ ಏರಿದ ಚಿನ್ನ- ಬೆಳ್ಳಿ ದರ; ಇಂದಿನ ದರವೆಷ್ಟು?
ಸಾಂದರ್ಭಿಕ ಚಿತ್ರ (AI)
ತೈಲ ಬೆಲೆ ಏರಿಕೆಯಿಂದ ಜಾಗತಿಕವಾಗಿ ಮಾರುಕಟ್ಟೆಗಳು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಗಮನ ನೀಡಿದ್ದಾರೆ.
ಫೆಬ್ರವರಿಯಲ್ಲಿ ಸ್ಥಿರವಾಗಿದ್ದ ಚಿನ್ನದ ಬೆಲೆ ಮಾರ್ಚ್ ಆರಂಭದಲ್ಲಿ ಏರಿಕೆಯಾಗಿ 17 ಸಾವಿರ ದಾಟಿತ್ತು. ಆದರೆ ನಂತರ ಕಳೆದ ಸೋಮವಾರದಿಂದ ಚಿನ್ನದ ಬೆಲೆ ಕುಸಿತದ ಹಾದಿಯಲ್ಲಿತ್ತು. ಸೋಮವಾರ ದಿಢೀರ್ ಕುಸಿತ ಕಂಡ ಚಿನ್ನದ ಬೆಲೆ ಗ್ರಾಂಗೆ 16,980 ರೂ.ಗೆ ಬಂದು ನಿಂತಿತ್ತು. ಮಂಗಳವಾರ ಮತ್ತೆ ತುಸು ಕುಸಿದಿದೆ. ಬುಧವಾರ ತೀವ್ರವಾಗಿ ಕುಸಿದ ನಂತರ ಗುರುವಾರ ಮತ್ತು ಶುಕ್ರವಾರವೂ ಬೆಲೆಯಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ. ಆದರೆ ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಹಠಾತ್ ಏರಿಕೆ ಕಂಡುಬಂದಿತ್ತು. ಮಾರ್ಚ್ 09 ಸೋಮವಾರ ಮತ್ತೆ ಕುಸಿದ ಶುದ್ಧ ಚಿನ್ನದ ಬೆಲೆ 16 ಸಾವಿರದ ಮಿತಿಯೊಳಗೆ ನಿಂತಿತ್ತು. ಇದೀಗ ಮಂಗಳವಾರ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ.
ಚಿನ್ನ-ಬೆಳ್ಳಿ ಬೆಲೆ ಏರಿಕೆಗೆ ಕಾರಣವೇನು?
ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ದಾಳಿ ಮಾಡಿರುವುದು, ಜಾಗತಿಕ ಭೌಗೋಳಿಕ ರಾಜಕೀಯದ ಉದ್ವಿಗ್ನತೆ ಮತ್ತು ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ವಾತಾವರಣದ ನಡುವೆಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕುಸಿದಿದ್ದವು. ಆದರೆ ಇದೀಗ ತೈಲ ಬೆಲೆ ಏರಿಕೆಯಿಂದ ಜಾಗತಿಕವಾಗಿ ಮಾರುಕಟ್ಟೆಗಳು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಗಮನ ನೀಡಿದ್ದಾರೆ. ಯುದ್ಧ ನಿಲುಗಡೆಯ ಬಗ್ಗೆ ಅಮೆರಿಕದ ಅಧ್ಯಕ್ಷರು ಸೂಚನೆ ನೀಡಿರುವುದು ಮತ್ತು ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಕೆಲವು ಪ್ರಮುಖ ನೀತಿಗಳನ್ನು ಜಾರಿಗೆ ತರಲು ಸಿದ್ಧರಾಗಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನ- ಬೆಳ್ಳಿಯ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.
ಇಂದಿನ ಚಿನ್ನದ ದರ ಹೇಗಿದೆ?
ಮಾರ್ಚ್ 10ರಂದು ಮಂಗಳವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಸೋಮವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 70 ರೂ. ಏರಿಕೆ ಕಂಡು ಹತ್ತು ಗ್ರಾಂ ಬೆಲೆ 1,62,380 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 65 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,48,850 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 53 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,21,790 ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಮಾರ್ಚ್ 10ರಂದು ಮಂಗಳವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಸ್ವಲ್ಪ ಏರಿಕೆಯಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16,238 (+70) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,885 (+65) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,179 (+53) ರೂ. ಬೆಲೆಗೆ ತಲುಪಿದೆ.
ಮತ್ತೆ ಏರಿದ ಬೆಳ್ಳಿ ದರ
ಫೆಬ್ರವರಿ ಆರಂಭದಿಂದಲೇ ಸತತ ಕುಸಿತ ಕಂಡಿದ್ದ ಬೆಳ್ಳಿ ಫೆಬ್ರವರಿ ಮಧ್ಯಭಾಗದಲ್ಲಿ ಏರು ಹಾದಿಯಲ್ಲಿತ್ತು. ಕಳೆದ ವಾರದ ಆರಂಭದಲ್ಲಿ ಸೋಮವಾರ ಬರೋಬ್ಬರಿ ಗ್ರಾಂಗೆ 35 ರೂ. ಏರಿಕೆಯಾಗಿ ಒಂದು ಕೆಜಿ ಬೆಳ್ಳಿ ಬೆಲೆಯು 3,30,000 ರೂ. ಗೆ ತಲುಪಿತ್ತು.
ಆದರೆ ಕಳೆದ ಮಂಗಳವಾರದಿಂದ ಬೆಳ್ಳಿಯ ಬೆಲೆ ಕುಸಿತದ ಹಾದಿಯಲ್ಲಿದೆ. ಮಾರ್ಚ್ 02ರಂದು ಬೆಳ್ಳಿಯ ಬೆಲೆಯಲ್ಲಿ ಮತ್ತೆ ಕುಸಿತ ಕಂಡುಬಂದಿದೆ. ಗ್ರಾಂಗೆ 20 ರೂ. ಕುಸಿತ ಕಂಡು ಒಂದು ಕೆಜಿ ಬೆಳ್ಳಿ ಬೆಲೆಯು 2,95,000 ರೂ. ಗೆ ಬಂದು ನಿಂತಿತ್ತು. ಬುಧವಾರ ಮತ್ತೆ ಪ್ರತಿ ಗ್ರಾಂಗೆ 10 ರೂ. ಕುಸಿದ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,85,000 ರೂ. ಗೆ ಬಂದು ನಿಂತಿದೆ. ನಂತರ ಗುರುವಾರ, ಶುಕ್ರವಾರ ಮತ್ತು ಶನಿವಾರ ಇದೇ ಬೆಲೆಗೆ ಸ್ಥಿರವಾಗಿ ನಿಂತಿದೆ. ನಿನ್ನೆ ಸೋಮವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಕುಸಿದ ಬೆಳ್ಳಿ ಪ್ರತಿ ಕೆಜಿಗೆ 2,80,000 ರೂ. ಗೆ ಬಂದು ನಿಂತಿತ್ತು. ಇದೀಗ ಮಂಗಳವಾರ ಪ್ರತಿ ಗ್ರಾಂಗೆ 10 ರೂ. ಏರಿಕೆಯಾಗಿರುವ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,90,000 ರೂ.ಗೆ ತಲುಪಿದೆ.
ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 16,253 (+ 70) ರೂ., 22 ಕ್ಯಾರೆಟ್ ಚಿನ್ನದ ದರ 14,900 (+ 65) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 16,238 (+70) ರೂ., 22 ಕ್ಯಾರೆಟ್ ಚಿನ್ನದ ದರ 14,885 (+65) ರೂ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 16,243 (+ 70) ರೂ., 22 ಕ್ಯಾರೆಟ್ ಚಿನ್ನದ ದರ 14,890 (+ 65) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,418 (+109) ರೂ., 22 ಕ್ಯಾರೆಟ್ ಚಿನ್ನದ ದರ 15,050 (+100) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 16,238 (-125) ರೂ., 22 ಕ್ಯಾರೆಟ್ ಚಿನ್ನದ ದರ 14,885 (+65) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 16,238 (+ 70) ರೂ., 22 ಕ್ಯಾರೆಟ್ ಚಿನ್ನದ ದರ 14,885 (+ 65) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 16,253 (+ 70) ರೂ., 22 ಕ್ಯಾರೆಟ್ ಚಿನ್ನದ ದರ 14,900 (+ 65) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 16,253 (+ 70) ರೂ., 22 ಕ್ಯಾರೆಟ್ ಚಿನ್ನದ ದರ 14,900 (+ 65) ರೂ.
ಲಕ್ನೋ: 24 ಕ್ಯಾರೆಟ್ ಚಿನ್ನದ ದರ 16,253 (+ 70) ರೂ., 22 ಕ್ಯಾರೆಟ್ ಚಿನ್ನದ ದರ 14,900 (+ 65) ರೂ.