×
Ad

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರ ಹಳೆಯ ಡೀಪ್ ಫೇಕ್ ವೀಡಿಯೊ ಮತ್ತೆ ವೈರಲ್!

Update: 2024-05-24 22:15 IST

ನಾರಾಯಣ ಮೂರ್ತಿ | PTI

ಹೊಸದಿಲ್ಲಿ: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ನಮ್ಮ ವ್ಯವಹಾರಗಳನ್ನು ಅನುಮೋದಿಸಿದ್ದಾರೆ ಎಂದು ಕೆಲವು ವಂಚಕರು ಈ ಹಿಂದೆ ಅವರ ಮಾತುಗಳು ಹಾಗೂ ಸಂದರ್ಶನಗಳ ಡೀಪ್ ಫೇಕ್ ವೀಡಿಯೊಗಳನ್ನು ಹಂಚಿಕೊಂಡಿದ್ದರು. ಈ ಕುರಿತು ಡಿಸೆಂಬರ್ ತಿಂಗಳಲ್ಲಿ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ನಾರಾಯಣ ಮೂರ್ತಿ, ನನಗೂ ಅಂತಹ ಕಂಪನಿಗಳಿಗೂ ಯಾವುದೇ ಸಂಬಂಧವಿಲ್ಲ. ನಾನು ಅಂಥ ಕಂಪನಿಗಳ ಯಾವುದೇ ವ್ವಹಾರಗಳನ್ನು ಅನುಮೋದಿಸಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರಲ್ಲದೆ, ಅಂತಹ ಡೀಪ್ ಫೇಕ್ ವೀಡಿಯೊಗಳ ಬಗ್ಗೆ ಎಚ್ಚರದಿಂದಿರುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದ್ದರು.

ಆ ಡೀಪ್ ಫೇಕ್ ವೀಡಿಯೊಗಳಲ್ಲಿ ನಾರಾಯಣ ಮೂರ್ತಿ BTA AI Evex, British Bitcoin Profit, Bit Lyte Sync, Immediate Momentum ಹಾಗೂ Capital is Ventures ಕಂಪನಿಗಳ ವ್ಯವಹಾರಗಳನ್ನು ಅನುಮೋದಿಸಿದ್ದಾರೆ ಎಂದು ಪ್ರತಿಪಾದಿಸಲಾಗಿತ್ತು. ಈ ಕುರಿತು ನಾರಾಯಣ ಮೂರ್ತಿ ಅವರು ಸಾರ್ವಜನಿಕ ಸ್ಪಷ್ಟೀಕರಣ ನಂತರ ಮರೆಯಾಗಿದ್ದ ಈ ಡೀಪ್ ಫೇಕ್ ವೀಡಿಯೊಗಳು, ಇದೀಗ ಮತ್ತೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಇದರಿಂದ ಡೀಪ್ ಫೇಕ್ ವೀಡಿಯೊಗಳ ಕುರಿತು ನಾರಾಯಣ ಮೂರ್ತಿ ಅವರು ನೀಡಿದ್ದ ಎಚ್ಚರಿಕೆ ಮತ್ತೆ ಮುನ್ನೆಲೆಗೆ ಬಂದಿದೆ.

Full View

ಅಂತರ್ಜಾಲ ಬಳಕೆದಾರರು ಮಾಹಿತಿಯ ನೈಜತೆಯನ್ನು ಪರಿಶೀಲಿಸಬೇಕು ಹಾಗೂ ತಾವು ವಿಶ್ವಾಸವಿರಿಸುವ ಮೂಲಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದೂ ಅವರು ತಮ್ಮ ಪೋಸ್ಟ್‌ನಲ್ಲಿ ಎಚ್ಚರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News