×
Ad

ಮಹಾರಾಷ್ಟ್ರ | ಬಾಲಕಿಯ ಅತ್ಯಾಚಾರವೆಸಗಿ ಬೀದಿಯಲ್ಲಿ ತ್ಯಜಿಸಿ ಹೋದ ದುಷ್ಕರ್ಮಿಗಳು ; ಐವರನ್ನು ವಶಕಕ್ಕೆ ಪಡೆದ ಪೊಲೀಸರು

Update: 2024-10-14 20:50 IST

ಸಾಂದರ್ಭಿಕ ಚಿತ್ರ

ಮುಂಬೈ : ಅಪರಿಚಿತ ದುಷ್ಕರ್ಮಿಗಳು ಒಂಬತ್ತು ವರ್ಷದ ಬಾಲಕಿಗೆ ಮಾದಕ ಪದಾರ್ಥ ನೀಡಿ, ಅತ್ಯಾಚಾರ ಎಸಗಿ, ಅನಂತರ ಬೀದಿಯಲ್ಲಿ ತ್ಯಜಿಸಿ ಹೋದ ಘಟನೆ ಮಹಾರಾಷ್ಟ್ರದ ಜಲ್ನಾ ನಗರದಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ದುಷ್ಕರ್ಮಿಗಳು ಬಾಲಕಿಯನ್ನು ರವಿವಾರ ರಾತ್ರಿ 11 ಗಂಟೆಗೆ ಚಂದನ್‌ಝಿರಾಹ ಪ್ರದೇಶದಲ್ಲಿ ತ್ಯಜಿಸಿ ಹೋದ ಬಳಿಕ, ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಅನಂತರ ಛತ್ರಪತಿ ಸಂಭಾಜಿನಗರದಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ವಗಾಯಿಸಲಾಯಿತು ಎಂದು ಅವರು ತಿಳಿಸಿದ್ದಾರೆ.

ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸ್ ಅಧೀಕ್ಷಕ ಅಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಾಥಮಿಕ ಸಾಕ್ಷ್ಯಗಳ ಪ್ರಕಾರ ಇವರಲ್ಲಿ ಓರ್ವ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಶಂಕಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಘಟನೆಯಿಂದ ಆಕ್ರೋಶಿತರಾದ ಸ್ಥಳೀಯರು ಛತ್ರಪತಿ ಸಂಭಾಜಿನಗರ್ ರಸ್ತೆ ತಡೆ ನಡೆಸಿದರು. ಅಲ್ಲದೆ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು.

ಬಾಲಕಿ ಮನೆಯಲ್ಲಿ ಏಕಾಂಗಿಯಾಗಿ ಇದ್ದ ಸಂದರ್ಭ ದುಷ್ಕರ್ಮಿಗಳು ಆಕೆಯನ್ನು ಎಳೆದೊಯ್ದಿದ್ದಾರೆ. ಅತ್ಯಾಚಾರ ಎಸಗಿದ್ದಾರೆ. ಅನಂತರ ಬೀದಿ ಬದಿ ತ್ಯಜಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಳು. ತಾಯಿ ಯೋಜನೆಯೊಂದರ ಅಡಿಯಲ್ಲಿ ನೆರವು ಪಡೆಯಲು ತೆರಳಿದ್ದಳು. ಆಕೆ ಮರಳಿ ಬಂದಾಗ ಮನೆಯಲ್ಲಿ ಪುತ್ರಿ ಇರಲಿಲ್ಲ. ಹುಡುಕಾಡಿದ ಬಳಿಕ ಬಾಲಕಿ ಸಮೀಪದ ಬೀದಿ ಬದಿಯಲ್ಲಿ ಪತ್ತೆಯಾದಳು ಎಂದು ಅವರು ತಿಳಿಸಿದ್ದಾರೆ.

ಮಹಿಳೆ ಚಂದನ್‌ಝಿರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News