×
Ad

ಮಹಾರಾಷ್ಟ್ರ| ಉಕ್ಕಿನ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ; 22 ಕಾರ್ಮಿಕರಿಗೆ ಗಾಯ

Update: 2024-08-24 20:39 IST

PC : ANI 

ಜಲ್ನಾ: ಮಹಾರಾಷ್ಟ್ರದ ಜಲ್ನಾ ನಗರದ ಕೈಗಾರಿಕಾ ಪ್ರಾಂಗಣದಲ್ಲಿರುವ ಉಕ್ಕಿನ ಕಾರ್ಖಾನೆಯಲ್ಲಿ ಶನಿವಾರ ಬಾಯ್ಲರ್ ಸ್ಫೋಟಗೊಂಡು ಕನಿಷ್ಠ 22 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ.

ಗಾಯಾಳುಗಳ ಪೈಕಿ ಮೂವರ ಕಾರ್ಮಿಕರ ಪರಿಸ್ಥಿತಿ ಚಿಂತಾಜನಕವಾಗಿದೆಯೆಂದು ಪೊಲೀಸ್ ಅಧೀಕ್ಷಕ ಅಜಯ್ ಕುಮಾರ್ ಬನ್ಸಾಲ್ ತಿಳಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಗಜ ಕೇಸರಿ ಸ್ಟೀಲ್ ಮಿಲ್‌ನಲ್ಲಿ ಬಾಯ್ಲರ್ ಸ್ಫೋಟಿಸಿದಾಗ, ಅದರಲ್ಲಿದ್ದ ಕಾದು ಕರಗಿರುವ ಕಬ್ಬಿಣವು ಕಾರ್ಮಿಕರ ಮೇಲೆ ಬಿದ್ದು ದುರ್ಘಟನೆ ಸಂಭವಿಸಿದೆಯೆಂದು ಅವರು ಹೇಳಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಮೂವರು ಗಾಯಾಳುಗಳನ್ನು ಛತ್ರಪತಿ ಸಂಭಾಜಿನಗರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಯ್ಲರ್ ಸ್ಫೋಟ ಸಂಭವಿಸಿರುವ ಕಾರ್ಖಾನೆಯು ಗುಜರಿಯಿಂದ ಉಕ್ಕಿನ ರಾಡ್‌ಗಳನ್ನು ತಯಾರಿಸುತ್ತಿತ್ತು. ಗಾಯಾಳು ಕಾರ್ಮಿಕರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕಾರ್ಖಾನೆಯ ಮಾಲಕನ ವಿರುದ್ದ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದೆಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News