×
Ad

ದೇಸಿ ಗೋವುಗಳಿಗೆ ʼರಾಜ್ಯಮಾತೆʼ ಸ್ಥಾನಮಾನ ನೀಡಿದ ಮಹಾರಾಷ್ಟ್ರ

Update: 2024-09-30 17:49 IST

Photo: X/@mieknathshinde

ಮಹಾರಾಷ್ಟ್ರ: ರಾಜ್ಯದ ದೇಸಿ ಗೋವುಗಳಿಗೆ ರಾಜ್ಯಮಾತೆ ಸ್ಥಾನಮಾನ ನೀಡಿ ಮಹಾರಾಷ್ಟ್ರ ಸರಕಾರ ಘೋಷಣೆಯನ್ನು ಮಾಡಿದೆ.

ರಾಜ್ಯವೊಂದು ಪ್ರಾಣಿಯೊಂದಕ್ಕೆ ರಾಜ್ಯ ಮಾತೆಯ ಸ್ಥಾನ ಮಾನ ನೀಡಿರುವುದು ಇದೇ ಮೊದಲಾಗಿದೆ. ಸೋಮವಾರ ಹೈನುಗಾರಿಕೆ ಅಭಿವೃದ್ಧಿ ಇಲಾಖೆ ಅಂಗೀಕರಿಸಿದ ನಿರ್ಣಯದಲ್ಲಿ ದೇಸಿ ಹಸುಗಳಿಗೆ ರಾಜ್ಯಮಾತೆಯ ಸ್ಥಾನಮಾನವನ್ನು ನೀಡಲಾಗುವುದು ಎಂದು ಹೇಳಿಕೊಂಡಿದೆ.

ದೇಸಿ ಹಸುಗಳು ರೈತರಿಗೆ ವರದಾನವಾಗಿದ್ದು, ಮಹಾರಾಷ್ಟ್ರ ಸರ್ಕಾರವು ಅದಕ್ಕೆ 'ರಾಜ್ಯ ಮಾತಾ' ಸ್ಥಾನಮಾನ ನೀಡಲು ನಿರ್ಧರಿಸಿದೆ. ಇದಲ್ಲದೆ ಗೋಶಾಲೆಗಳಲ್ಲಿ ದೇಸಿ ಹಸುಗಳನ್ನು ಸಾಕಲು ನೆರವು ನೀಡಲಾಗುವುದು ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News