ಮಹಾರಾಷ್ಟ್ರ ಚುನಾವಣೆ | ಅಜಿತ್ ಬಣದಿಂದ ‘ಗಡಿಯಾರ’ ಚಿಹ್ನೆ ಬಳಕೆ ವಿರುದ್ಧ ಸುಪ್ರೀಮ್‌ಗೆ ಎನ್‌ಸಿಪಿ(ಎಸ್‌ಪಿ) ಮೊರೆ
Update: 2024-10-03 22:22 IST
ಶರದ್ ಪವಾರ್ , ಅಜಿತ್ ಪವಾರ್ | PC : PTI
ಹೊಸದಿಲ್ಲಿ : ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ಅಜಿತ್ ಪವಾರ್ ನೇತೃತ್ವದ ತನ್ನ ಪ್ರತಿಸ್ಪರ್ಧಿ ಬಣವು ಪಕ್ಷದ ‘ಗಡಿಯಾರ’ ಚಿಹ್ನೆಯನ್ನು ಬಳಸುವುದನ್ನು ನಿಲ್ಲಿಸುವಂತೆ ನಿರ್ದೇಶನವನ್ನು ಕೊರಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ.
ಮತದಾರರಲ್ಲಿ ಗೊಂದಲವನ್ನು ತಪ್ಪಿಸಲು ಅಜಿತ್ ಪವಾರ್ ಬಣಕ್ಕೆ ಹೊಸ ಚುನಾವಣಾ ಚಿಹ್ನೆಯನ್ನು ನೀಡುವಂತೆ ವಾದಿಸಿರುವ ಅರ್ಜಿಯು, ಚುನಾವಣಾ ಪ್ರಕ್ರಿಯೆಯಲ್ಲಿ ನ್ಯಾಯಪರತೆ ಮತ್ತು ಸ್ಪಷ್ಟತೆಯ ಅಗತ್ಯವಿದೆ ಎಂದು ಹೇಳಿದೆ.