×
Ad

ಅಕ್ರಮ ಹಣ ವರ್ಗಾವಣೆ ಪ್ರಕರಣ : ಎಫ್ಐಆರ್ ರದ್ದತಿ ಕೋರಿ ದಿಲ್ಲಿ ಹೈಕೋರ್ಟ್ ಗೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅರ್ಜಿ

Update: 2023-12-19 22:49 IST

ಜಾಕ್ವೆಲಿನ್ ಫರ್ನಾಂಡಿಸ್ | Photo 

ಹೊಸದಿಲ್ಲಿ: ವಂಚಕ ಸುಕೇಶ್ ಚಂದ್ರಶೇಖರ ವಿರುದ್ಧ ಜಾರಿ ನಿರ್ದೇಶನಾಲಯ (ಈಡಿ) ವು ದಾಖಲಿಸಿರುವ 200 ಕೋಟಿ ರೂ.ಗಳ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನ್ನ ವಿರುದ್ಧದ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ದಿಲ್ಲಿ ಹೈಕೋರ್ಟ್ ಮೆಟ್ಟಲನ್ನೇರಿದ್ದಾರೆ. ಅರ್ಜಿಯು ಈ ವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ.

ಪ್ರಕರಣದಲ್ಲಿ ಈಡಿ ಸಲ್ಲಿಸಿರುವ ಎರಡನೇ ಪೂರಕ ದೋಷಾರೋಪ ಪಟ್ಟಿ ಮತ್ತು ಇಲ್ಲಿಯ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿಯಿರುವ ಸಂಬಂಧಿತ ಕಾನೂನು ಕ್ರಮಗಳನ್ನು ರದ್ದುಗೊಳಿಸುವಂತೆಯೂ ಜಾಕ್ವೆಲಿನ್ ಅರ್ಜಿಯಲ್ಲಿ ಕೋರಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News