×
Ad

ಒಂದೇ ಏಕದಿನ ಇನಿಂಗ್ಸ್‌ ನಲ್ಲಿ ಗರಿಷ್ಠ ಕ್ಯಾಚ್ ವಿಶ್ವ ದಾಖಲೆ ಸರಿಗಟ್ಟಿದ ಮುಹಮ್ಮದ್ ರಿಝ್ವಾನ್

Update: 2024-11-08 21:04 IST

ಮುಹಮ್ಮದ್ ರಿಝ್ವಾನ್ | PC : X 

ಅಡಿಲೇಡ್ : ಆಸ್ಟ್ರೇಲಿಯ ವಿರುದ್ಧ ಶುಕ್ರವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ ವಿಕೆಟ್ ಹಿಂದುಗಡೆ ರೋಚಕ ಪ್ರದರ್ಶನ ನೀಡಿದ ಪಾಕಿಸ್ತಾನದ ಮುಹಮ್ಮದ್ ರಿಝ್ವಾನ್ ದಾಖಲೆ ಪುಸ್ತಕದಲ್ಲಿ ತನ್ನ ಹೆಸರನ್ನು ಪಡಿ ಮೂಡಿಸಿದರು.

ಒಂದೇ ಏಕದಿನ ಇನಿಂಗ್ಸ್‌ನಲ್ಲಿ ಅತ್ಯಂತ ಹೆಚ್ಚು ಕ್ಯಾಚ್‌ಗಳನ್ನು ಪಡೆದ ರಿಝ್ವಾನ್ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇತ್ತೀಚೆಗಷ್ಟೇ ಪಾಕಿಸ್ತಾನದ ಏಕದಿನ ಹಾಗೂ ಟಿ20 ಕ್ರಿಕೆಟ್ ತಂಡದ ನಾಯಕನಾಗಿ ನೇಮಕಗೊಂಡಿರುವ ರಿಝ್ವಾನ್ ಒಟ್ಟು ಆರು ಕ್ಯಾಚ್‌ಗಳನ್ನು ಪಡೆದು ಈ ಮಹತ್ವದ ಸಾಧನೆ ಮಾಡಿರುವ ವಿಶ್ವದ ವಿಕೆಟ್‌ ಕೀಪರ್‌ಗಳ ಪಟ್ಟಿಗೆ ಸೇರ್ಪಡೆಯಾದರು.

ಶಾಹೀನ್ ಅಫ್ರಿದಿ ಹಾಗೂ ಹಾರಿಸ್ ರವೂಫ್ ನೇತೃತ್ವದ ಪಾಕಿಸ್ತಾನದ ಬೌಲಿಂಗ್ ಪಡೆಯು ಆಸ್ಟ್ರೇಲಿಯವನ್ನು ಕೇವಲ 163 ರನ್‌ಗೆ ನಿಯಂತ್ರಿಸಿತು.

ತನ್ನ ಸ್ಥಿರ ಪ್ರದರ್ಶನಕ್ಕೆ ಖ್ಯಾತಿ ಪಡೆದಿರುವ ರಿಝ್ವಾನ್ ಪಾಕಿಸ್ತಾನದ ಫೀಲ್ಡಿಂಗ್ ರಣನೀತಿಯಲ್ಲಿ ಮುಖ್ಯ ಪಾತ್ರವಹಿಸಿದರು. ತನ್ನ ಬೌಲರ್‌ಗಳು ವೇಗ ಹಾಗೂ ಸ್ವಿಂಗ್ ಬೌಲಿಂಗ್‌ ಲಾಭ ಪಡೆಯಲು ನೆರವಾದರು.

ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸಿದ ಅಫ್ರಿದಿ, ರವೂಫ್ ಹಾಗೂ ನಸೀಂ ಶಾ ಆಸ್ಟ್ರೇಲಿಯದ ಬ್ಯಾಟರ್‌ಗಳನ್ನು ಒತ್ತಡಕ್ಕೆ ಸಿಲುಕಿಸಿದರು.

►ಏಕದಿನ ಇನಿಂಗ್ಸ್‌ನಲ್ಲಿ ಗರಿಷ್ಠ ಕ್ಯಾಚ್‌ಗಳನ್ನು(6)ಪಡೆದವರು.

ಆಡಮ್ ಗಿಲ್‌ಕ್ರಿಸ್ಟ್(ಆಸ್ಟ್ರೇಲಿಯ) 2000ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ

ಅಲೆಕ್ ಸ್ಟಿವರ್ಟ್(ಇಂಗ್ಲೆಂಡ್)2000ರಲ್ಲಿ ಝಿಂಬಾಬ್ವೆ ವಿರುದ್ಧ

ಆಡಮ್ ಗಿಲ್‌ಕ್ರಿಸ್ಟ್(ಆಸ್ಟ್ರೇಲಿಯ) 2003ರಲ್ಲಿ ನಮೀಬಿಯಾ ವಿರುದ್ಧ

ಆಡಮ್ ಗಿಲ್‌ಕ್ರಿಸ್ಟ್(ಆಸ್ಟ್ರೇಲಿಯ) 2004ರಲ್ಲಿ ಶ್ರೀಲಂಕಾದ ವಿರುದ್ಧ

ಮಾರ್ಕ್ ಬೌಚರ್(ದಕ್ಷಿಣ ಆಫ್ರಿಕಾ) 2007ರಲ್ಲಿ ಪಾಕಿಸ್ತಾನದ ವಿರುದ್ಧ

ಆಡಮ್ ಗಿಲ್‌ಕ್ರಿಸ್ಟ್(ಆಸ್ಟ್ರೇಲಿಯ)2007ರಲ್ಲಿ ಭಾರತದ ವಿರುದ್ಧ

ಮ್ಯಾಟ್ ಪ್ರಿಯರ್(ಇಂಗ್ಲೆಂಡ್)2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ

ಜೋಸ್ ಬಟ್ಲರ್(ಇಂಗ್ಲೆಂಡ್) 2013ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ

ಮ್ಯಾಥ್ಯೂ ಕ್ರಾಸ್(ಸ್ಕಾಟ್‌ಲ್ಯಾಂಡ್)2014ರಲ್ಲಿ ಕೆನಡಾ ವಿರುದ್ಧ

ಸರ್ಫರಾಝ್ ಅಹ್ಮದ್(ಪಾಕಿಸ್ತಾನ)2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ

ಕ್ವಿಂಟನ್ ಡಿಕಾಕ್(ದ.ಆಫ್ರಿಕಾ)2023ರಲ್ಲಿ ಅಫ್ಘಾನಿಸ್ತಾನದ ವಿರುದ್ಧ

ಮುಹಮ್ಮದ್ ರಿಝ್ವಾನ್(ಪಾಕಿಸ್ತಾನ) 2024ರಲ್ಲಿ ಆಸ್ಟ್ರೇಲಿಯದ ವಿರುದ್ಧ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News