ಪಂಜಾಬ್ | ರೈತರ ಧರಣಿ ; ರೈಲು ಸಂಚಾರಕ್ಕೆ ಅಡ್ಡಿ

Update: 2024-05-09 15:11 GMT

Photo : PTI - ಸಾಂದರ್ಭಿಕ ಚಿತ್ರ

ಚಂಡಿಗಢ: ಪಂಜಾಬ್-ಹರ್ಯಾಣ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಿಂದ ಗುರುವಾರ ಹಲವು ರೈಲುಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.

ಕೆಲವು ರೈಲುಗಳ ಸಂಚಾರವನ್ನು ಅರ್ಧದಲ್ಲೇ ಮೊಟಕುಗೊಳಿಸಲಾಗಿದೆ. 115ಕ್ಕೂ ಅಧಿಕ ರೈಲುಗಳ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ರೈಲ್ವೆ ತಿಳಿಸಿದೆ.

ಈ ನಡುವೆ ದಿಲ್ಲಿಗೆ ಹಾಗೂ ಚಂಡಿಗಢ-ಅಮೃತಸರ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳು ಸೇರಿದಂತೆ 69 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ)ದ ಅಡಿಯಲ್ಲಿ ರೈತರು ಹರ್ಯಾಣ ಪೊಲೀಸರು ಬಂಧಿಸಿದ ಮೂವರು ರೈತರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಎಪ್ರಿಲ್ 17ರಿಂದ ಹರ್ಯಾಣದ ಗಡಿಗೆ ತಾಗಿಕೊಂಡಿರುವ ಶಂಭು ರೈಲು ನಿಲ್ದಾಣದ ಹಳಿಗಳ ಮೇಲೆ ಕುಳಿತು ಧರಣಿ ನಡೆಸುತಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News