×
Ad

ಭಾರತೀಯ ಪ್ರಜೆಯಾಗಿ ಮೊದಲ ಮತ ಚಲಾಯಿಸಿದ ನಟ ಅಕ್ಷಯ್ ಕುಮಾರ್

Update: 2024-05-20 11:34 IST

 ಅಕ್ಷಯ್ ಕುಮಾರ್ | PC : ANI 

ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ನಡೆಯುತ್ತಿದೆ. ಮುಂಬೈನಲ್ಲಿ ಸ್ಟಾರ್ ನಟ, ನಟಿಯರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ನಟ ಅಕ್ಷಯ್ ಕುಮಾರ್ ಅವರು ಭಾರತೀಯ ಪ್ರಜೆಯಾಗಿ ಮೊದಲ ಮತ ಚಲಾಯಿಸಿದ್ದಾರೆ. ಕೆನಡಾ ಪ್ರಜೆಯಾಗಿದ್ದ ಅಕ್ಷಯ್ ಕುಮಾರ್ 2023ರಲ್ಲಿ ಭಾರತೀಯ ಪೌರತ್ವವನ್ನು ಪಡೆದಿದ್ದರು.

ಮುಂಬೈನ ಮತಗಟ್ಟೆವೊಂದರಲ್ಲಿ ಮತದಾನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಭಾರತವು ಅಭಿವೃದ್ಧಿ ಅಭಿವೃದ್ಧಿಯಾಗಬೇಕು ಮತ್ತು ಸದೃಢವಾಗಬೇಕೆಂದು ನಾನು ಬಯಸುತ್ತೇನೆ. ಅದನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಿದ್ದೇನೆ’ ಎಂದು ಹೇಳಿದ್ದಾರೆ.

ಇಂದು ಬೆಳಗ್ಗೆ 7 ಗಂಟೆಗೆ ಮತಗಟ್ಟೆಗೆ ಬಂದಾಗ ಅಪಾರ ಸಂಖ್ಯೆಯ ಜನರು ಸೇರಿದ್ದರು. ಈಗಲೂ ಸುಮಾರು 200 ರಿಂದ 300 ಜನರು ಮತಗಟ್ಟೆಯೊಳಗೆ ನಿಂತಿದ್ದಾರೆ. ಹಾಗಾಗಿ ಈ ಬಾರಿ ಹೆಚ್ಚು ಮತದಾನ ಆಗಲಿದೆ ಎಂದು ಅಕ್ಷಯ್ ಕುಮಾರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News