ಶರದ್ ಪವಾರ್, ರಾಮದಾಸ್ ಅಠಾವಳೆ ಸಹಿತ 26 ಮಂದಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
Photo | freepressjournal
ಹೊಸದಿಲ್ಲಿ : ಶರದ್ ಪವಾರ್, ರಾಮದಾಸ್ ಅಠಾವಳೆ ಸಹಿತ 26 ಮಂದಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
10 ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳಲ್ಲಿ 7 ರಾಜ್ಯಗಳಿಂದ 26 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ ಎನ್‌ಸಿಪಿ (ಶರದ್) ಮುಖ್ಯಸ್ಥ ಶರದ್ ಪವಾರ್, ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಮತ್ತು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಸೇರಿದ್ದಾರೆ.
ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದವರು:
ಶರದ್ ಪವಾರ್ (ಎನ್‌ಸಿಪಿ), ರಾಮದಾಸ್ ಅಠಾವಳೆ (ಆರ್‌ಪಿಐ - ಅಠವಳೆ), ವಿನೋದ್ ತಾವ್ಡೆ (ಬಿಜೆಪಿ), ರಾಮರಾವ್ ವಾಡ್ಕುಟೆ (ಬಿಜೆಪಿ), ಮಾಯಾ ಇವ್ನಾಟೆ (ಬಿಜೆಪಿ), ಜ್ಯೋತಿ ವಾಘಮಾರೆ (ಶಿವಸೇನೆ - ಶಿಂಧೆ), ಪಾರ್ಥ್ ಪವಾರ್ (ಎನ್‌ಸಿಪಿ), ತಿರುಚ್ಚಿ ಶಿವ (ಡಿಎಂಕೆ), ಜೆ ಕಾನ್ಸ್ಟಂಟೈನ್ ರವೀಂದ್ರನ್ (ಡಿಎಂಕೆ), ಎಂ ತಂಬಿದುರೈ (ಎಐಎಡಿಎಂಕೆ), ಅನ್ಬುಮಣಿ ರಾಮದಾಸ್ (ಪಿಎಂಕೆ), ಎಂ ಕ್ರಿಸ್ಟೋಫರ್ ತಿಲಕ್ (ಕಾಂಗ್ರೆಸ್), ಎಲ್ ಕೆ ಸುದೀಶ್ (ಡಿಎಂಡಿಕೆ), ಪಶ್ಚಿಮ ಬಂಗಾಳ (5), ರಾಹುಲ್ ಸಿನ್ಹಾ (ಬಿಜೆಪಿ), ಬಾಬುಲ್ ಸುಪ್ರಿಯೋ (ಟಿಎಂಸಿ), ಮಾಜಿ ಡಿಜಿಪಿ ರಾಜೀವ್ ಕುಮಾರ್ (ಟಿಎಂಸಿ), ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ (ಟಿಎಂಸಿ), ಕೋಯೆಲ್ ಮಲ್ಲಿಕ್ (ಟಿಎಂಸಿ), ಜೋಗೆನ್ ಮೋಹನ್ (ಬಿಜೆಪಿ), ತೇರೋಸ್ ಗೋವಾಲಾ (ಬಿಜೆಪಿ), ಪ್ರಮೋದ್ ಬೋರೋ (UPPL), ಅಭಿಷೇಕ್ ಮನು ಸಿಂಘ್ವಿ (ಕಾಂಗ್ರೆಸ್), ವೆಂ ನರೇಂದ್ರ ರೆಡ್ಡಿ (ಕಾಂಗ್ರೆಸ್), ಲಕ್ಷ್ಮಿ ವರ್ಮಾ (ಬಿಜೆಪಿ), ಫುಲೋ ದೇವಿ ನೇತಮ್ (ಕಾಂಗ್ರೆಸ್), ಹಿಮಾಚಲ ಪ್ರದೇಶ (1), ಅನುರಾಗ್ ಶರ್ಮಾ (ಕಾಂಗ್ರೆಸ್) ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾರ್ಚ್ 16 ರಂದು ರಾಜ್ಯಸಭೆಯ 11 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.