ಪ್ರಶಸ್ತಿ ಪ್ರದಾನ-ವಾಪಸ್

Update: 2015-12-31 18:46 GMT

ಜು.5: ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರಿಗೆ ಬೆಂಗಳೂರಿನಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಫೆಲೋಶಿಪ್ ಪ್ರದಾನ.
ಜು.14: ಲೇಖಕಿ ವೈದೇಹಿಗೆ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಪ್ರಶಸ್ತಿ ಪ್ರದಾನ.
ಜು.26: ಅನಕೃ ನಿರ್ಮಾಣ್ ಸ್ವರ್ಣ ಪ್ರಶಸ್ತಿ ಪ್ರದಾನ: ಪ್ರೊ.ಬರಗೂರು ರಾಮಚಂದ್ರಪ್ಪ, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಡಾ.ಎಚ್.ಎಸ್. ವೆಂಕಟೇಶ್ ಮೂರ್ತಿಗೆ ಪ್ರದಾನ.
ಸೆ.7: ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಹತ್ಯೆಯನ್ನು ಖಂಡಿಸಿ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್‌ರಿಂದ (ಚಂಪಾ)2009ರ ಪ್ರತಿಷ್ಠಿತ ಪಂಪ ಪ್ರಶಸ್ತಿ ವಾಪಸ್.
ಸೆ.15: ಚಿತ್ರದುರ್ಗದ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರಿಗೆ ‘ಪೆರಿಯಾರ್ ಪ್ರಶಸ್ತಿ’ ಪ್ರಕಟ.
ಸೆ.19: ಸಂಸ್ಕೃತಿ ಚಿಂತಕ ಅಗ್ರಹಾರ ಕೃಷ್ಣಮೂರ್ತಿಗೆ ಪ್ರೊ.ಕಿ.ರಂ.ನಾಗರಾಜ ಸಂಸ್ಕೃತಿ ಪ್ರಶಸ್ತಿ ಪ್ರದಾನ
ಸೆ.19: ಪ್ರೊ.ಕೆ.ಎಸ್.ಭಗವಾನ್, ಡಾ.ರಹಮತ್ ತರೀಕೆರೆ, ಡಾ.ಬಿ. ಎನ್.ಸುಮಿತ್ರಬಾಯಿ, ಡಾ.ಮೊಗಳ್ಳಿ ಗಣೇಶ್, ಡಾ.ರಾಜೇಂದ್ರ ಚಿನ್ನಿ ಸೇರಿದಂತೆ ಐವರಿಗೆ ಪ್ರತಿಷ್ಠಿತ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪ್ರಕಟ.
ಅ.3: ಡಾ.ಕಲಬುರ್ಗಿ ಹತ್ಯೆ ಖಂಡಿಸಿ ಯುವ ಲೇಖಕರಾದ ಚಿದಾನಂದ ಸಾಲಿ, ಹಣಮಂತ ಹಾಲಿಗೇರಿ, ಸತೀಶ್ ಜವರೇಗೌಡ, ಸಂಗಮೇಶ ಮೆಣಸಿನಕಾಯಿ, ವೀರಣ್ಣ ಮಡಿವಾಳರ ಹಾಗೂ ಶ್ರೀದೇವಿ ಆಲೂರು ‘ಕಸಾಪ’ಕ್ಕೆ ತಮ್ಮ ಪ್ರಶಸ್ತಿ ವಾಪಸ್ ನೀಡಿದರು.
ಅ.12: ಕಲಬುರ್ಗಿ ಹತ್ಯೆ ಖಂಡಿಸಿ ಲೇಖಕರಾದ ಅರವಿಂದ ಮಾಲಗತ್ತಿ ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ, ಕುಂ.ವೀರಭದ್ರಪ್ಪ, ಡಾ.ರಹಮತ್ ತರೀಕೆರೆ ಪ್ರಶಸ್ತಿ ವಾಪಸ್.
ಅ.24: ಚಿತ್ರದುರ್ಗದ ಮುರುಘ ಮಠದಿಂದ ಕಲಬುರ್ಗಿಗೆ ಮರಣೋತ್ತರ ‘ಬಸವಶ್ರೀ ಪ್ರಶಸ್ತಿ’ ಪ್ರಕಟ, ಆದರೆ ಕಲಬುರ್ಗಿಯವರ ಕುಟುಂಬದ ಸದಸ್ಯರಿಂದ ಪ್ರಶಸ್ತಿ ನಿರಾಕರಣೆ. ಮೈಸೂರಿನ ಅದ್ದೂರಿ ದಸರಾ ಜಂಬೂ ಸವಾರಿಗೆ ಸಾಕ್ಷಿಯಾದ ಜನ ಸಾಗರ.
ಡಿ.6..‘ಮೀಸಲಾತಿ ಇನ್ನೆಷ್ಟು ದಿನ’ ಎಂದು ಪ್ರಶ್ನಿಸಿದ ಆರೆಸ್ಸೆಸ್‌ನ ಮೋಹನ್ ಭಾಗವತ್‌ಗೆ ‘ಜಾತಿಯ ಅವಮಾನ ಇನ್ನೆಷ್ಟು ದಿನ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಡಾ.ಎಲ್.ಹನುಮಂತಯ್ಯ ಸವಾಲು ಹಾಕಿದ್ದರು.
ಡಿ.18 ಖ್ಯಾತ ಲೇಖಕ, ಭಾಷಾ ವಿಜ್ಞಾನಿ ಕೆ.ವಿ.ತಿರುಮಲೇಶ್ ಅವರ ಅಕ್ಷಯ ಕಾವ್ಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪ್ರಕಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News