ಅಗಲಿದ ಗಣ್ಯರು

Update: 2015-12-31 18:46 GMT

ಡಾ.ಸರೋಜಿನಿ ಮಹಿಷಿ
ಜ.26: ಕನ್ನಡ ಪರ ಹೋರಾಟಗಳಿಗೆ ಪ್ರೇರಕ ಶಕ್ತಿಯಾಗಿದ್ದ ಕೇಂದ್ರದ ಮಾಜಿ ಸಚಿವೆ ಹಾಗೂ ನಾಡೋಜ ಪುರಸ್ಕೃತ, ಹಿರಿಯ ಲೇಖಕಿ ಡಾ.ಸರೋಜಿನಿ ಮಹಿಷಿ(88) ಅವರು ಹೊಸದಿಲ್ಲಿಯಲ್ಲಿ ರವಿವಾರ ಹೃದಯಾಘಾತದಿಂದ ನಿಧನರಾದರು.
ಆರ್.ಕೆ.ಲಕ್ಷ್ಮಣ್

ಜ.27: ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ.ಲಕ್ಷ್ಮಣ್(94) ಸೋಮವಾರ ಸಂಜೆ ಪುಣೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಡಾ.ವಸು ಮಳಲಿ
ಫೆ.4: ಬೆಂಗಳೂರು ವಿಶ್ವವಿದ್ಯಾ ಲಯದ ಇತಿಹಾಸ ಪ್ರಾಧ್ಯಾಪಕಿ ಹಾಗೂ ಪ್ರಖರ ಚಿಂತಕಿ, ಲೇಖಕಿ, ಚಿತ್ರ ನಿರ್ದೇಶಕಿಯೂ ಆಗಿದ್ದ ಡಾ.ವಸು ಮಳಲಿ(47) ಹೃದಯ ಸಂಬಂಧಿ ಕಾಯಿಲೆಯಿಂದ ಮಂಗಳವಾರ ಬೆಳಗ್ಗೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾದರು..

ಸಿದ್ದಲಿಂಗಯ್ಯ ಮಾ.13: ಕನ್ನಡ ಚಿತ್ರರಂಗಕ್ಕೆ ಬಂಗಾರದಂತಹ ಚಿತ್ರಗಳನ್ನು ಕೊಟ್ಟ ಅಪ್ಪಟ ಕನ್ನಡದ ಸೃಜನಶೀಲ ನಿರ್ದೇಶಕ ಸಿದ್ದಲಿಂಗಯ್ಯ ಅವರು ಗುರುವಾರ ನಿಧರಾದರು.

 
ಕೆ.ಎನ್.ಟೇಲರ್ ಮಾ.18: ತುಳು ರಂಗಭೂಮಿಯ ಭೀಷ್ಮ, ತುಳು ಸಿನೆಮಾ ಕ್ಷೇತ್ರದ ಪ್ರಥಮ ಸೂಪರ್‌ಸ್ಟಾರ್ ಖ್ಯಾತಿಯ ಕೆ.ಎನ್.ಟೇಲರ್ ಬುಧವಾರ ಕೊನೆಯುಸಿರೆಳೆದರು. ಬೆಂಕಿ ಮಹಾದೇವು
ಆ.4: ಮೈಸೂರಿನ ಬಿಜಿಎಸ್ ಅಪೋಲೊ ಆಸ್ಪತ್ರೆಯಲ್ಲಿ ಮಾಜಿ ಸಚಿವ ಎಂ.ಮಹಾದೇವು(ಬೆಂಕಿ ಮಹಾದೇವು) ನಿಧನ.
ಕಯ್ಯರ ಕಿಂಞಣ್ಣ ರೈ
ಆ.9: ಗಡಿನಾಡ ಕನ್ನಡ ಹೋರಾಟ ಗಾರ, ಸಾಹಿತಿ, ನಾಡೋಜ, ಶತಾ ಯುಷಿ ಕಯ್ಯರ ಕಿಂಞಣ್ಣ ರೈ(10) ನಿಧನ.
ಅರವಿಂದ್ ಮಲೆಬೆನ್ನೂರು
ಆ.17: ಕಮ್ಯುನಿಸ್ಟ್ ಪಕ್ಷದ ಹಿರಿಯ ಮುಖಂಡ ಅರವಿಂದ್ ಮಲೆ ಬೆನ್ನೂರು(87) ನಿಧನ.
ಅಲಿ ಹಫೀಝ್
ಸೆ.22: ಉರ್ದು ಪತ್ರಿಕೋದ್ಯಮದ ದಿಗ್ಗಜ, ಹಿರಿಯ ಪತ್ರಕರ್ತ ಅಲಿ ಹಫೀಝ್(84) ನಿಧನ.
ವೌಲಾನ ಖದೀರ್ ಅಹ್ಮದ್ ಅದಾವುಲ್ ಆಮಿರಿ
ಆ.28: ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ, ಅಖಿಲ ಭಾರತ ಮಿಲ್ಲಿ ಕೌನ್ಸಿಲ್ ರಾಜ್ಯಾಧ್ಯಕ್ಷ ವೌಲಾನ ಖದೀರ್ ಅಹ್ಮದ್ ಅದಾವುಲ್ ಆಮಿರಿ(65) ನಿಧನ.
ಎಂ.ಎಂ.ಕಲಬುರ್ಗಿ
ಆ.30: ಹಿರಿಯ ಸಾಹಿತಿ, ಖ್ಯಾತ ಸಂಶೋಧಕ, ವೈಚಾರಿಕ ಚಿಂತಕ, ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಡಾ.ಎಂ.ಎಂ.ಕಲಬುರ್ಗಿ, ದುಷ್ಕರ್ಮಿಗಳ ಗುಂಡಿಗೆ ಬಲಿ.
ವಿ.ಎಸ್.ಮಳೀಮಠ್
ಡಿ.22 ಕರ್ನಾಟಕ ಗಡಿ ರಕ್ಷಣಾ ಆಯೋಗದ ಅಧ್ಯಕ್ಷ, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಎಸ್.ಮಳೀಮಠ್ ನಿಧನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News