ಮನಾರತ್ ಅಲ್ ಮಸಾಅದ್ ವೆಲ್ಫೇರ್ ಎಸೋಸಿಯೇಶನ್ ಕಕ್ಕಿಂಜೆ: ಸಾಮೂಹಿಕ ವಿವಾಹ

Update: 2016-01-04 05:39 GMT

ಕಕ್ಕಿಂಜೆಯಲ್ಲಿ ಮಾದರಿ ಸರಳ ಸಾಮೂಹಿಕ ವಿವಾಹ ಸಂಪನ್ನ ಕಕ್ಕಿಂಜೆ:

ಮುಸ್ಲಿಂ ಸಮಾಜ ವಿದ್ಯಾಭ್ಯಾಸದಲ್ಲಿ ಹಿಂದೆ ಬೀಳದಂತೆ ಎಚ್ಚರ ವಹಿಸುವುದು ಮತ್ತು ವಿವಾಹದ ಕಾರ್ಯದಲ್ಲಿ ಹಿಂದೆ ಬಿದ್ದು ಹೆಣ್ಣು ಮಕ್ಕಳು ಕಣ್ಣೀರು ಸುರಿಸುತ್ತಾ ಮನೆಯಲ್ಲಿರುವುದನ್ನು ಮನಗಂಡು ಅಂತವರ ಕಣ್ಣೀರೊರೆಸುವ ಇಂತಹಾ ಕಾರ್ಯಕ್ರಮ ಸಂಯೋಜಿಸುವ ಮೂಲಕ ಮುಸ್ಲಿಂ ಸಮಾಜದ ಏಳಿಗೆಯ ಕೈಂಕರ್ಯವನ್ನು ಈ ರೀತಿಯ ವಿವಾಹ ವೇದಿಕೆಗಳ ಮೂಲಕ ಎಲ್ಲ ಜಮಾತ್‌ಗಳೂ ಅನುಷ್ಠಾನಕ್ಕೆ ತರಬೇಕಾಗಿದೆ ಎಂದು ದ. ಕ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದರು.

ಮನಾರತ್ ಅಲ್ ಮಸಾಅದ್ ವೆಲ್ಫೇರ್ ಎಸೋಸಿಯೇಶನ್ ಕಕ್ಕಿಂಜೆ ಸೆಂಟರ್ ಇದರ ಆಶ್ರಯದಲ್ಲಿ ಜ. 3 ರಂದು ಕಕ್ಕಿಂಜೆಯ ನೂರುಲ್ ಇಸ್ಲಾಂ ಮದರದ ವಠಾರದಲ್ಲಿ ಜರುಗಿದ ಸರಳ ಸಾಮೂಹಿಕ ವಿವಾಹದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ನಿಖಾಹ್‌ಗೆ ನೇತೃತ್ವ ನೀಡಿ ಅವರು ಮಾತನಾಡಿದರು. ಅಧ್ಯಕ್ಷತೆಯನ್ನು ಶಾಸಕ ವಸಂತ ಬಂಗೇರ ವಹಿಸಿದ್ದರು. ದುಆ ಪ್ರಾರ್ಥನೆಗೆ ಸಮಸ್ತ ಕೇಂದ್ರ ಮುಶಾವರ ಸದಸ್ಯ ಕೆ. ಪಿ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲು ನೆರವೇರಿಸಿದರು. ಕಕ್ಕಿಂಜೆ ಮಸೀದಿ ಮುದರ್ರಿಸ್ ಐ. ಕೆ ಮೂಸಾ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭವನ್ನುದ್ದೇಶಿಸಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿ ಅಧ್ಯಕ್ಷ ಎಂ. ಎಸ್ ಮುಹಮ್ಮದ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ಕೆ ಶಾಹುಲ್ ಹಮೀದ್, ಕೆ. ಹೆಚ್ ಅಹಮ್ಮದ್‌ಕುಂಞಿ ಮುಸ್ಲಿಯಾರ್, ಮುಸ್ಲಿಂ ಸೆಂಟ್ರಲ್ ಕಮಿಟಿ ಕಾರ್ಯದರ್ಶಿ ಹನೀಫ್ ಹಾಜಿ, ಗೋಳ್ತಮಜಲು ಹಜಾಜ್ ಸಮೂಹ ಸಂಸ್ಥೆಗಳ ಹಾಜಿ ಸಿ ಹನೀಫ್, ಜಿಲ್ಲಾ ಮುಸ್ಲಿಂ ಐಖ್ಯತಾ ಸಮಿತಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಪ್ರಗತಿಪರ ಕೃಷಿಕ ಅನಂತ್‌ರಾವ್ ಚಾರ್ಮಾಡಿ ಇವರುಗಳು ಶುಭಹಾರೈಸಿದರು.

ಕೆಐಸಿ ಕುಂಬ್ರ ಪ್ರೋಫೆಸರ್ ಅನೀಶ್ ಕೌಸರಿ ಮುಖ್ಯ ಪ್ರಭಾಷಣ ನಡೆಸಿಕೊಟ್ಟರು. ವೇದಿಕೆಯಲ್ಲಿ ಸಯ್ಯಿದ್ ಜಿಫ್ರಿ ಜುನೈದ್ ತಂಙಳ್, ಉಜಿರೆ ಜಿ. ಪಂ ಸದಸ್ಯ ಕೆ ಕೊರಗಪ್ಪ ನಾಯ್ಕ, ಕಕ್ಕಿಂಜೆ ಮಸೀದಿ ಅಧ್ಯಕ್ಷ ರ ಅಬ್ದುಲ್ಲ ಹಾಜಿ, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ. ಎ ನಝೀರ್, ಎಸಿಇ ಪೈಪ್‌ಲೈನ್ ಮೆನೇಜರ್ ಅಜೆಯ್ ಸಿಂಗ್ ಡಿ. ಜಿ, ಉಜಿರೆ ಮಸೀದಿ ಅಧ್ಯಕ್ಷ ಬಿ.ಎಮ್ ಅಬ್ದುಲ್ ಹಮೀದ್, ಯು. ಎ ಹಮೀದ್, ಅರೆಕ್ಕಲ್ ಮಮ್ಮಿಕುಂಞಿ, ಸಾಲಿ ಹಾಜಿ,. ದಾವೂದ್ ಹಾಜಿ, , ಕಕ್ಕಿಂಜೆ ಮಸೀದಿಯ ಮಾಜಿ ಅಧ್ಯಕ್ಷರುಗಳಾದ ಪಿ. ಹೆಚ್ ಹಸೈನಾರ್ ಹಾಜಿ, ಪಿ. ಕೆ ಮೊದಿನ್‌ಕುಂಞಿ ಹಾಜಿ, ಎ. ಕೆ ಮುಹಮ್ಮದ್ ಹಾಝಿ ಅಡ್ಡೂರು, ನೆರಿಯ ಗ್ರಾ. ಪಂ ಅಧ್ಯಕ್ಷ ಮುಹಮ್ಮದ್ ಬಲಿಪಾಯ, ಹಂಝ ಮುಸ್ಲಿಯಾರ್, ಸಂಚಾಲಕ ಇಲ್ಯಾಸ್, ಕಾರ್ಯದರ್ಶಿ ಅಬ್ದುಲ್ ಬಶೀರ್, ಮೊದಲಾದವರು ಉಪಸ್ಥಿತರಿದ್ದರು.

ನವಾರ್ ಅರ್ಹರಿ ಖಿರಾಅತ್ ಪಠಿಸಿದರು. ಮನಾರತ್ ಅಲ್ ಮಸಾಅದ್ ವೆಲ್ಫೇರ್ ಅಸೋಸಿಯೇಶನ್ ಇದರ ಅಧ್ಯಕ್ಷ, ಸಮಾಜ ಸೇವಕ ಹಾಜಿ ಹಸನಬ್ಬ ಚಾರ್ಮಾಡಿ ಸ್ವಾಗತಿಸಿದರು. ಕಕ್ಕಿಂಜೆ ಮಸೀದಿಯಲಿ 63 ವರ್ಷ ಮುಅದ್ದಿನ್ ಆಗಿ ಸೇವೆ ಸಲ್ಲಿಸಿದ ಕೆ. ಹೆಚ್ ಹೈದರ್ ಹಾಜಿ ಅವರನ್ನು ಸನ್ಮಾನಿಸಲಾಯಿತು. ಶರೀಫ್ ಅವರು ಸನ್ಮಾನಪತ್ರ ವಾಚಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

ಸಾಮೂಹಿಕ ವಿವಾಹ ನಿಮಿತ್ತ 10 ಜೊತೆ ವಿವಾಹ ನೆರವೇರಿತು. ನಿಖಾಹ್‌ಗೆ ತ್ವಾಖಾ ಉಸ್ತಾದ್ ನೇತೃತ್ವ ನೀಡಿದರು. 1 ವಿವಾಹವನ್ನು ಮುಂದಕ್ಕೆ ನಡೆಸುವ ತೀರ್ಮಾನದೊಂದಿಗೆ ನಡೆದ ಈ ಸಮಾರಂಭದಲ್ಲಿ ವಧುವಿಗೆ 5 ಪವನ್ ಚಿನ್ನ, 25 ಸಾವಿರ ರೂ ಬೆಲೆಯ ವಸ್ತ್ರ ಮತ್ತು ಅಲಂಕಾರಿಕ ಸಮಾಗ್ರಿಗಳು, ವರನಿಗೆ ವಿವಾಹ ವಸ್ತ್ರ ಖರೀದಿಗೆ 10 ಸಾವಿರ ರೂ. ಗಳ ಕೊಡುಗೆ ಸಮರ್ಪಿಸಲಾಯಿತು. ಅಲ್ಲದೆ ಸಂಭ್ರದ ಸಮಾರಂಭ ಹಾಗೂ ಊಟೋಪಚಾರ ಆತಿಥ್ಯದ ಜವಾಬ್ಧಾರಿಯನ್ನು ಮನಾರತ್ ಅಲ್ ಮಸಾಅದ್ ವೆಲ್ಫೇರ್ ಸಂಸ್ಥೆ ವಹಿಸಿಕೊಂಡಿತು.

3 ಜಮಾತ್ ವ್ಯಾಪ್ತಿಯ ಊರವರಿಂದ ಮಾತ್ರ ದೇಣಿಗೆ ಸಂಗ್ರಹಿಸಿ ಕಾರ್ಯಕ್ರಮ ಆಯೋಜಿಸಿರುವುದಾಗಿ ಚಾರ್ಮಾಡಿ ಹಸನಬ್ಬ ತಿಳಿಸಿದರು. ಚಿನ್ನಾಭರಣ ಹಸ್ತಾಂತರ: ಜ. 2 ರಂದು ಸಂಜೆ ವಧುವಿನ ಕಡೆಯವರಿಗೆ ಚಿನ್ನಾಭರಣ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಚಾರ್ಮಾಡಿ ಗ್ರಾ. ಪಂ ಅಧ್ಯಕ್ಷೆ ಶೈಲಜ, ತಾ. ಪಂ ಸದಸ್ಯೆ ಹೇಮಾವತಿ ಮತ್ತು ಸರೋಜಿನಿ ರಮೇಶ್ ಅವರು ಮುಖ್ಯ ಅತಿಥಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News