ಮುಂದಿನ ಶೆಕ್ಷಣಿಕ ಸಾಲಿನಲ್ಲಿ 145 ವಸತಿ ಶಾಲೆಗಳ ಆರಂಭ: ಸಚಿವ ಆಂಜನೇಯ

Update: 2016-01-04 17:39 GMT

ಬೆಂಗಳೂರು, ಜ.4: ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಹೋಬಳಿ ಮಟ್ಟದಲ್ಲಿ 145 ವಸತಿ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ನಿಗಮಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಂದಿನ ಶೈಕ್ಷಣಿಕ ಸಾಲಿನಲ್ಲಿ ನವೋದಯ ಮಾದರಿಯ ಆಂಗ್ಲ ಮಾಧ್ಯಮದ 145 ವಸತಿ ಶಾಲೆ ಗಳನ್ನು ಆರಂಭಿಸಲಾಗುವುದು. ತಲಾ 10 ಎಕರೆ ಯಲ್ಲಿ ನಿರ್ಮಾಣವಾಗಲಿರುವ ಈ ವಸತಿ ಶಾಲೆಗ ಳಿಗೆ 12 ರಿಂದ 15 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುವುದು ಎಂದು ಅವರು ಹೇಳಿದರು. ವಿದ್ಯಾರ್ಥಿಗಳು, ಸಿಬ್ಬಂದಿಗಳು, ಭದ್ರತಾ ಸಿಬ್ಬಂದಿ ಗಳು ಉಳಿದುಕೊಳ್ಳಲು ವಸತಿ, ಕೈ ತೋಟ, ಸೇರಿ ದಂತೆ ಸಂಪೂರ್ಣ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಒಂದು ಶಾಲೆಯಲ್ಲಿ 250 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಲಭ್ಯವಾಗಲಿದೆ.ಸರಕಾರಿ ಭೂಮಿ ಇಲ್ಲದಿರುವ ಕಡೆ ಖಾಸಗಿಯವ ರಿಂದ ಮಾರ್ಗಸೂಚಿ ದರದನ್ವಯ ಭೂಮಿ ಖರೀದಿ ಮಾಡಲಾಗುವುದು ಎಂದು ತಿಳಿಸಿದರು.
ಪ್ರತಿಯೊಂದು ಶಾಲೆಗೂ 11 ಮಂದಿ ಶಿಕ್ಷಕರು, 16 ಮಂದಿ ಬೋಧಕೇತರ ಸಿಬ್ಬಂದಿಗಳಂತೆ 1595 ಶಿಕ್ಷಕರು, 2320 ಬೋಧಕೇತರ ಸಿಬ್ಬಂದಿಗಳು ಸೇರಿ ಒಟ್ಟು 3915 ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳ ಲಾಗುವುದು ಎಂದು ಅವರು ಹೇಳಿದರು.

ಎಸ್ಸಿ-ಎಸ್ಟಿಯ ಪೋಸ್ಟ್ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗಾಗಿ 100 ಹೊಸ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುವುದು. ಇದರಲ್ಲಿ ಶೇ.75ರಷ್ಟು ಎಸ್ಸಿ- ಎಸ್ಟಿ ಹಾಗೂ ಶೇ.25ರಷ್ಟು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿರುತ್ತಾರೆ. ಈ ಹಾಸ್ಟೆಲ್‌ಗಳಿಗೆ 100 ಮಂದಿ ವಾರ್ಡನ್, ಅಡುಗೆ ಮಾಡುವವರು, ಅಡುಗೆ ಸಹಾಯಕರು, ಭದ್ರತಾ ಸಿಬ್ಬಂದಿ ಸೇರಿ ದಂತೆ 600 ಮಂದಿಯನ್ನು ನೇಮಕ ಮಾಡಿ ಕೊಳ್ಳಲಾಗುವುದು ಎಂದು ಅವರು ಹೇಳಿದರು.
ಇದಲ್ಲದೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಯರಿಗಾಗಿ 100 ಹಾಸ್ಟೆಲ್‌ಗಳನ್ನು ನಿರ್ಮಿಸಲಾಗು ತ್ತಿದ್ದು, ಇದರಲ್ಲಿ ಶೇ.75ರಷ್ಟು ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರು ಹಾಗೂ ಶೇ.25ರಷ್ಟು ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರು ಇರುತ್ತಾರೆ. ಈ ಹಾಸ್ಟೆಲ್‌ಗಳಿಗೂ 100 ಮಂದಿ ವಾರ್ಡನ್, ಅಡುಗೆ ಮಾಡುವವರು, ಅಡುಗೆ ಸಹಾಯಕರು, ಭದ್ರತಾ ಸಿಬ್ಬಂದಿ ಸೇರಿದಂತೆ 600 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ವಸತಿ ಶಾಲೆಗಳ ನಿರ್ಮಾಣಕ್ಕೆ 1740 ಕೋಟಿ ರೂ. ಹಾಗೂ ಹಾಸ್ಟೆಲ್ ಕಟ್ಟಡಗಳ ನಿರ್ಮಾಣಕ್ಕೆ 600 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುವುದು. ರಾಜ್ಯದ ಎಲ್ಲ ಹೋಬಳಿಗಳಲ್ಲೂ ವಸತಿ ಶಾಲೆ ಗಳನ್ನು ಆರಂಭಿಸಬೇಕು ಎಂಬುದು ಸರಕಾರದ ಸಂಕಲ್ಪವಾಗಿದೆ ಎಂದು ಅವರು ಹೇಳಿದರು.
ಹೈಕೋರ್ಟ್ ನಿರ್ದೇಶನದ ಪ್ರಕಾರ 2011ಕ್ಕಿಂತ ಮುಂಚಿತವಾಗಿ ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 409 ಶಿಕ್ಷಕರನ್ನು ಖಾಯಂಗೊಳಿಸಲಾಗಿದೆ. ಇನ್ನು 200ಕ್ಕೂ ಹೆಚ್ಚು ಮಂದಿಯಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ 504 ಶಾಲೆಗಳಿದ್ದು, 1600 ಹುದ್ದೆಗಳು ಖಾಲಿಯಿವೆ. ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವುದಕ್ಕಿಂತ ಮುಂಚೆ ಕೆಪಿಎಸ್ಸಿ ಮೂಲಕ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳ ಲಾಗುವುದು ಎಂದು ಆಂಜನೇಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News