ಬ್ರಾಹ್ಮಣವಾದ-ಖಾಸಗೀಕರಣ ಸಾಮಾಜಿಕ ನ್ಯಾಯದ ಶತ್ರುಗಳು: ಶಿವಸುಂದರ್

Update: 2016-01-17 18:40 GMT

ಮೀಸಲಾತಿಗಾಗಿ ಒತ್ತಾಯಿಸಿ ದುಂಡು ಮೇಜಿನ ಚರ್ಚೆ
ಬೆಂಗಳೂರು: ಬ್ರಾಹ್ಮಣವಾದ ಹಾಗೂ ಖಾಸಗೀಕರಣ ಸಾಮಾಜಿಕ ನ್ಯಾಯದ ಶತ್ರುಗಳಾಗಿದ್ದು, ಸಾರ್ವಜನಿಕ ಉದ್ದಿಮೆಗಳನ್ನು ಉಳಿಸಿಕೊಳ್ಳುವತ್ತ ಸಂಘಟಿತ ಹೋರಾಟದ ಅಗತ್ಯವಿದೆ ಎಂದು ಹಿರಿಯ ಅಂಕಣಕಾರ ಶಿವಸುಂದರ್ ಅಭಿಪ್ರಾಯಿಸಿದ್ದಾರೆ.

ರವಿವಾರ ಬಹುಜನ ವಿದ್ಯಾರ್ಥಿ ಸಂಘ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಒಬಿಸಿ, ಎಸ್ಸಿ ಹಾಗೂ ಎಸ್ಟಿ ವರ್ಗಗಳಿಗೆಖಾಸಗಿ ವಲಯದಲ್ಲಿ ಮೀಸಲಾತಿಗಾಗಿ ಒತ್ತಾಯಿಸಿ ಆಯೋಜಿಸಿದ್ದ ದುಂಡು ಮೇಜಿನ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಲಾಭದಲ್ಲಿ ನಡೆಯುತ್ತಿದ್ದ ಎಚ್‌ಎಂಟಿ, ಎನ್‌ಜಿಎಫ್ ಸೇರಿದಂತೆ ಹಲವು ಸಾರ್ವಜನಿಕ ಕಂಪೆನಿಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿ,ಆ ಜಾಗದಲ್ಲಿ ಖಾಸಗಿ ಕಂಪೆನಿಗಳನ್ನು ಸ್ಥಾಪಿಸಲಾಗಿದೆ. ಆ ಮೂಲಕ ದೇಶದ ಸಂಪತ್ತು ಖಾಸಗಿ ವ್ಯಕ್ತಿಯ ಪಾಲಾಗುವಂತೆ ನೋಡಿಕೊಳ್ಳ ಲಾಗಿದೆ ಎಂದು ಅಂಕಣಕಾರ ಶಿವಸುಂದರ್ ಅಭಿಪ್ರಾಯಿಸಿದರು.

ಈಗಲೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಉದ್ಯೋಗಗಳು ಸೃಷ್ಟಿ ಯಾಗುತ್ತಿದ್ದು, ಆ ವಲಯಕ್ಕೆ ಒಳಪಟ್ಟ ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳನ್ನು ಉಳಿಸಿಕೊಳ್ಳುವತ್ತ ಹೆಚ್ಚಿನ ಮುಂಜಾಗ್ರತೆ ವಹಿಸಿಕೊಳ್ಳಬೇಕಾಗಿದೆ. ಇದರ ಜೊತೆಗೆ ಖಾಸಗಿ ಕಂಪೆನಿಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡದೆ, ಈಗಿರುವ ಖಾಸಗಿ ಕಂಪೆನಿಗಳಲ್ಲಿ ಮೀಸಲಾತಿಗೆ ಅನುಗುಣವಾಗಿ ನೇಮಕಾತಿ ಮಾಡಿಕೊಳ್ಳುವಂತೆ ಒತ್ತಾಯಿಸಬೇಕಾಗಿದೆ ಎಂದು ಅವರು ತಿಳಿಸಿದರು.

ಸರಕಾರ ಖಾಸಗಿ ಕಂಪೆನಿಗಳನ್ನು ಬೆಳೆಸುವ ನಿಟ್ಟಿನಲ್ಲಿ ರೈತರಿಂದ ನೂರಾರು ಎಕರೆ ಭೂ ಪ್ರದೇಶವನ್ನುಬಲವಂತವಾಗಿ ವಶಪಡಿಸಿಕೊಳ್ಳು ತ್ತಿದ್ದು, ರಿಯಾಯಿತಿ ದರದಲ್ಲಿ ವಿದ್ಯುತ್, ನೀರು ಹಾಗೂ ತೆರಿಗೆ ವಿನಾ ಯಿತಿಯನ್ನು ಕೊಡುತ್ತಿದೆ. ಆದರೆ, ಆ ಕಂಪೆನಿಗಳ ಉದ್ಯೊಗಿಗಳು ಮಾತ್ರ ವಿದೇಶಿಯಾಗಿರುತ್ತಾರೆ. ಇಲ್ಲವೇ ಮೇಲ್ವರ್ಗಕ್ಕೆ ಸೇರಿದವರಾಗಿರು ತ್ತಾರೆ. ಇದರ ಪರಿಣಾಮ ಭೂಮಿ ಕಳೆದುಕೊಂಡ ರೈತರು ಬೀದಿಪಾಲಾ ಗಿರುತ್ತಾರೆಂದು ಅವರು ಅಭಿಪ್ರಾಯಿಸಿದರು.
ಹಿರಿಯ ವಕೀಲ ಶ್ರೀಧರ್ ಪ್ರಭು ಮಾತನಾಡಿ, ಖಾಸಗಿ ಕಂಪೆನಿಗಳ ನ್ನೆವುದು ಬರೀ ನೆಪವಷ್ಟೆ. ಆ ಕಂಪೆನಿಗಳು ರೂಪುಗೊಂಡಿರುವುದು ಸಾರ್ವಜನಿಕರ ಹಣದಿಂದ. ಹೀಗಾಗಿ ದೇಶದಲ್ಲಿ ಸ್ಥಾಪನೆಯಾಗುವ ಯಾವುದೇ ತರಹದ ಕಂಪೆನಿಗಳಲ್ಲಿ ಮೀಸಲಾತಿಯನ್ನು ಕೇಳುವುದಕ್ಕೆ ಯಾವುದೇ ಹಿಂಜರಿಕೆ ಪಡಬೇಕಾಗಿಲ್ಲವೆಂದು ಅವರು ತಿಳಿಸಿದರು.

ದೇಶದಲ್ಲಿ ಹುಟ್ಟಿದ್ದ ಪ್ರತಿಯೊಬ್ಬರಿಗೂ ಸಾಮಾಜಿಕ ಹೊಣೆಗಾರಿಕೆ ಇದೆ. ಅದರಲ್ಲೂ ರೈತರಿಂದ ಲಕ್ಷಾಂತರ ಎಕರೆ ಪ್ರದೇಶವನ್ನು ಬಲವಂತ ವಾಗಿ ಪಡೆದು, ಸರಕಾರದಿಂದ ವರ್ಷಕ್ಕೆ ಸಾವಿರಾರು ಕೋಟಿ ರೂ.ತೆರಿಗೆ ವಿನಾಯಿತಿ ಪಡೆಯುವ ಖಾಸಗಿ ಕಂಪೆನಿಗಳು ಸಾಮಾಜಿಕ ಹೊಣೆಗಾರಿಕೆ ಹೆಚ್ಚಿದೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಖಾಸಗಿ ಕಂಪೆನಿಗಳು ಮೀಸಲಾತಿಯನ್ನು ಅನುಸರಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕೆಂದು ಅವರು ಒತ್ತಾಯಿ ಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿ ಕುಲಪತಿ ಪ್ರೊ.ಬಿ. ತಿಮ್ಮೇಗೌಡ, ಬಹುಜನ ವಿದ್ಯಾರ್ಥಿ ಸಂಘದ ಮುಖಂಡ ಪ್ರೊ.ಎ. ಹರಿರಾಮ್, ಪತ್ರಕರ್ತ ಪಾರ್ವತೀಶ್, ವಕೀಲ ಅನಂತ್ ನಾಯಕ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News