×
Ad

ಮಂಗಳೂರು : ಪೋಲಿಸ್ ಹುದ್ದೆಯ ನೇಮಕಾತಿ

Update: 2016-01-25 18:23 IST

ಮಂಗಳೂರು : ದ.ಕ.ಜಿಲ್ಲಾ ಪೋಲಿಸ್ ಘಟಕದಲ್ಲಿ ಖಾಲಿ ಇರುವ 162 ಸಿವಿಲ್ ಪೋಲಿಸ್ ಕಾನ್ಸ್‌ಟೇಬಲ್ (ಪುರುಷ/ಮಹಿಳೆ) ಹಾಗೂ 24 ಸಶಸ್ತ್ರ ಪೋಲಿಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅರ್ಜಿಯನ್ನು ಅಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ಮಾತ್ರ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸಲು ಫೆಬ್ರವರಿ 5 ಕೊನೆಯ ದಿನಾಂಕ.
   www.ksp.gov.in  ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ, ವಿದ್ಯಾರ್ಹತೆ, ವಯೋಮಿತಿ, ಸಹಿಷ್ಣತೆ ಪರೀಕ್ಷೆ, ದೇಹ ದಾರ್ಢ್ಯತೆ ಪರೀಕ್ಷೆ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಹಾಗೂ ಖಾಲಿ ಹುದ್ದೆಗಳ ವರ್ಗೀಕರಣ ಮತ್ತು ಇತರ ಸಂಪೂರ್ಣ ಮಾಹಿತಿ ವಿವರಗಳನ್ನು ಪೋಲಿಸ್ ಇಲಾಖೆಯ ಅಧಿಕೃತ ವೆಬ್‌ಸೈಟ್ ನಿಂದ ಪಡೆಯಬಹುದಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News