124 ಜೂನಿಯರ್ ಅಸಿಸ್ಟಂಟ್ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಸಿಬಿಎಸ್ಇ
Photo credit: PTI
ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿಯು (ಸಿಬಿಎಸ್ಇ) ಜೂನಿಯರ್ ಅಸಿಸ್ಟೆಂಟ್ ಮತ್ತು ಇತರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಸಿಬಿಎಸ್ಇ ಯ ಅಧಿಕೃತ ವೆಬ್‌ಸೈಟ್ cbse.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಸಂದರ್ಭದಲ್ಲಿ ಸಂಸ್ಥೆಯಲ್ಲಿ 124 ಹುದ್ದೆಗಳನ್ನು ಭರ್ತಿ ಮಾಡುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22 ಡಿಸೆಂಬರ್ 2025.
ಹುದ್ದೆಯ ವಿವರಗಳು:
1. ಸಹಾಯಕ ಕಾರ್ಯದರ್ಶಿ: 8 ಹುದ್ದೆಗಳು
2. ಸಹಾಯಕ ಪ್ರಾಧ್ಯಾಪಕರು ಮತ್ತು ಸಹಾಯಕ ನಿರ್ದೇಶಕರು: 27 ಹುದ್ದೆಗಳು
3. ಲೆಕ್ಕಪತ್ರ ಅಧಿಕಾರಿ: 2 ಹುದ್ದೆಗಳು
4. ಸೂಪರಿಂಟೆಂಡೆಂಟ್: 27 ಹುದ್ದೆಗಳು
5. ಜೂನಿಯರ್ ಅನುವಾದ ಅಧಿಕಾರಿ: 9 ಹುದ್ದೆಗಳು
6. ಜೂನಿಯರ್ ಅಕೌಂಟೆಂಟ್: 16 ಹುದ್ದೆಗಳು
7. ಜೂನಿಯರ್ ಅಸಿಸ್ಟೆಂಟ್: 35 ಹುದ್ದೆಗಳು
ಅರ್ಹತಾ ಮಾನದಂಡಗಳು
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಹ ಅಭ್ಯರ್ಥಿಗಳು https://www.cbse.gov.in/cbsenew/cbse.html ನಲ್ಲಿ ಲಭ್ಯವಿರುವ ವಿವರವಾದ ಅಧಿಸೂಚನೆಯ ಮೂಲಕ ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಯನ್ನು ಪರಿಶೀಲಿಸಬಹುದು.
ಆಯ್ಕೆ ಪ್ರಕ್ರಿಯೆ
ಆಯ್ಕೆ ಪ್ರಕ್ರಿಯೆಯು ಹುದ್ದೆಯಿಂದ ಹುದ್ದೆಗೆ ಬದಲಾಗುತ್ತದೆ. ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುತ್ತಿರುವ ಹುದ್ದೆಗೆ ಆಯ್ಕೆ ಪ್ರಕ್ರಿಯೆಯನ್ನು ಪರಿಶೀಲಿಸಬೇಕಾಗುತ್ತದೆ.
ಪರೀಕ್ಷಾ ಶುಲ್ಕ
ಪರೀಕ್ಷಾ ಶುಲ್ಕವನ್ನು 2 ರೀತಿಯಲ್ಲಿ ವಿಧಿಸಲಾಗಿದೆ: (i) ಅರ್ಜಿ ಶುಲ್ಕವು ಎಸ್ಸಿ /ಎಸ್ಟಿ /ವಿಕಲಚೇತನರು/ ಮಾಜಿ ಸೈನಿಕರು / ಮಹಿಳೆಯರಿಗೆ ಅನ್ವಯಿಸುವುದಿಲ್ಲ. (ii) ಎಲ್ಲರಿಗೂ ಪ್ರಕ್ರಿಯೆ ಶುಲ್ಕ ಅನ್ವಯಿಸುತ್ತದೆ (ಕಡ್ಡಾಯ).
ಎಸ್ಸಿ/ ಎಸ್ಟಿ/ ವಿಕಲಚೇತನರು/ ಮಾಜಿ ಸೈನಿಕರು / ಮಹಿಳಾ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ರೂ 250/- ಪಾವತಿಸಬೇಕಾಗುತ್ತದೆ ಮತ್ತು ಮೀಸಲಾತಿ ಇಲ್ಲದ/ ಒಬಿಸಿ/ಇಡಬ್ಲ್ಯುಎಸ್ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಗುಂಪು A ಗೆ ರೂ 1750/- ಮತ್ತು ಗುಂಪು B ಮತ್ತು C ಗೆ ರೂ 1050 ಪಾವತಿಸಬೇಕಾಗುತ್ತದೆ. ಡೆಬಿಟ್ ಕಾರ್ಡ್‌ಗಳು (ರೂಪೇ/ವೀಸಾ/ಮಾಸ್ಟರ್ಕಾರ್ಡ್/ಮಾಸ್ಟ್ರೊ), ಕ್ರೆಡಿಟ್ ಕಾರ್ಡ್‌ಗಳು (ಯುಪಿಐ, ಪಿಪಿಐ ವ್ಯಾಲೆಟ್ ಮತ್ತು ಕ್ರೆಡಿಟ್ ಲೈನ್‌ನಲ್ಲಿ ರೂಪೇ ಸಿಸಿ ಹೊರತುಪಡಿಸಿ), ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಯುಪಿಐ ಬಳಸಿ ಪಾವತಿ ಮಾಡಬಹುದು. ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು ಸಿಬಿಎಸ್ಸಿಯ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು.