ಮಹಿಳಾ ಉದ್ದಿಮೆದಾರರಿಗೆ ಸಾಲ ಸೌಲಭ್ಯ
ಮಂಗಳೂರು : ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ಸಣ್ಣ, ಮಧ್ಯಮ ಕೈಗಾರಿಕೆಗಳು ಹಾಗೂ ಸೇವಾ ಘಟಕಗಳನ್ನು ಪ್ರಾರಂಬಿಸುವ ಮಹಿಳಾ ಉದ್ದಿಮೆದಾರರಿಗೆ ಉತ್ತೇಜನ ನೀಡುವ ಸಲುವಾಗಿ ಹಾಗೂ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಘಟಕಗಳನ್ನು ಅಭಿವೃದ್ದಿ ಪಡಿಸಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದಿಂದ ಶೇಕಡಾ 10% ಬಡ್ಡಿ ಸಹಾಯಧನ ನೀಡುವ ಯೋಜನೆಯನ್ನು ಕರ್ನಾಟಕ ಸರ್ಕಾರವು ಜಾರಿಗೆ ತಂದಿರುತ್ತದೆ. ಈ ಯೋಜನೆಯನ್ವಯ ಮಹಿಳಾ ಉದ್ದಿಮೆದಾರರು ಕನಿಷ್ಟ ರೂ. 5 ಲಕ್ಷಗಳಿಂದ ಗರಿಷ್ಟ ರೂ. 50 ಲಕ್ಷಗಳ ಸಾಲ ಪಡೆಯಲು ಅರ್ಹರಿರುತ್ತಾರೆ. ಘಟಕದ ಮಲೀಕರು ಮಹಿಳಾ ಅಭ್ಯರ್ಥಿಯಾಗಿರಬೇಕು. ಪಾ ಲುದಾರಿಕಾ ಘಟಕ ನಿಯಮಿತ ಕಂಪೆನಿಗಳಲ್ಲಿ ಶೇಕಡಾ 51 ರಷ್ಟು ಪಾಲುಗಾರಿಕೆಯನ್ನು ಮಹಿಳೆಯರು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ, ಉಪ ಪ್ರಧಾನ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಶಾಖಾ ಕಛೇರಿ, 3ನೇ ಮಹಡಿ, ಸೋಮಯಾಜಿ ಹೌಸ್, ಬಂಟ್ಸ್ ಹಾಸ್ಟೆಲ್ ರಸ್ತೆ, ಮಂಗಳೂರು ಇವರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸ ಬಹುದು.