ಖ್ಯಾತ ಪತ್ರಕರ್ತ ಸೇನ್‌ಗುಪ್ತಾ ನಿಧನ

Update: 2016-01-28 12:30 GMT

ಹೊಸದಿಲ್ಲಿ,ಜ.28: ದಿ ಟೈಮ್ಸ್ ಆಫ್ ಇಂಡಿಯಾದ ವ್ಯವಸ್ಥಾಪಕ ಸಂಪಾದಕ ಅರಿಂದಮ್ ಸೇನ್‌ಗುಪ್ತಾ(61) ಅವರು ಗುರುವಾರ ಬೆಳಗಿನ ಜಾವ ಇಲ್ಲಿ ನಿಧನರಾದರು. ಅವರು ಕೆಲವು ಸಮಯದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.


ಸೇನ್‌ಗುಪ್ತಾ 1991ರಲ್ಲಿ ಟೈಮ್ಸ್ ಆಫ್ ಇಂಡಿಯಾ ಸಮೂಹಕ್ಕೆ ಸೇರಿದ್ದರು. ಅದಕ್ಕೂ ಮುನ್ನ 1988ರಿಂದ 1990ರವರೆಗೆ ಅದೇ ಸಂಸ್ಥೆಯಲ್ಲಿ ಅವರು ಸೇವೆ ಸಲ್ಲಿಸಿದ್ದರು.
ಟೈಮ್ಸ್ ಆಫ್ ಇಂಡಿಯಾ ಮತ್ತು ಇಕನಾಮಿಕ್ ಟೈಮ್ಸ್ ಈ ಎರಡೂ ಪತ್ರಿಕೆಗಳಲ್ಲಿ ವಿವಿಧ ಮಹತ್ವದ ಹುದ್ದೆಗಳನ್ನು ಅವರು ನಿರ್ವಹಿಸಿದ್ದರು.


ಪ್ರಧಾನಿ ನರೇಂದ್ರ ಮೋದಿ,ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಹಲವಾರು ರಾಜಕೀಯ ನಾಯಕರು ಸೇನ್‌ಗುಪ್ತಾ ನಿಧನಕ್ಕೆ ಸಂತಾಪಗಳನ್ನು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News