ಮುರುಡ್ ದುರಂತ:ಬೀಚ್‌ಗಳಲ್ಲಿ ಸುರಕ್ಷತಾ ಕ್ರಮಗಳ ವಿವರ ಕೇಳಿದ ಹೈಕೋರ್ಟ್

Update: 2016-02-02 13:33 GMT

ಮುಂಬೈ,ಫೆ.2: ರಾಯಗಡ ಜಿಲ್ಲೆಯ ಮುರುಡ್-ಜಂಜಿರಾ ಬೀಚ್‌ನಲ್ಲಿ ಸೋಮವಾರ ಕಡಲಿಗಿಳಿದಿದ್ದ 14 ವಿದ್ಯಾರ್ಥಿಗಳು ಜಲಸಮಾಧಿಯಾದ ಹಿನ್ನೆಲೆಯಲ್ಲಿ ಇಂತಹ ದುರ್ಘಟನೆಗಳನ್ನು ತಪ್ಪಿಸಲು ಬೀಚ್‌ಗಳನ್ನು ಸುರಕ್ಷಿತವಾಗಿಸಲು ತಾನು ಕೈಗೊಂಡಿರುವ ಕ್ರಮಗಳ ವಿವರಗಳನ್ನು ನೀಡುವಂತೆ ಮುಂಬೈ ಉಚ್ಚ ನ್ಯಾಯಾಲಯವು ಮಂಗಳವಾರ ಮಹಾರಾಷ್ಟ್ರ ಸರಕಾರಕ್ಕೆ ನಿರ್ದೇಶ ನೀಡಿದೆ.
ಬೀಚ್‌ಗಳಲ್ಲಿ ಸುರಕ್ಷತೆಯ ಕುರಿತು ಎನ್‌ಜಿಒ ಜನಹಿತ ಮಂಚ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾ.ಎನ್.ಎಚ್.ಪಾಟೀಲ್ ಅವರ ನೇತೃತ್ವದ ಪೀಠದ ಮುಂದೆ ಉಲ್ಲೇಖಿಸಿದ ನ್ಯಾಯವಾದಿ ಜಂಷೆಡ್ ಮಿಸ್ತ್ರಿ ಅವರು, ಈ ವಿಷಯದಲ್ಲಿ ಉಚ್ಚ ನ್ಯಾಯಾಲಯವು ಕೆಲವೊಂದು ನಿರ್ದೇಶನಗಳನ್ನು ಹೊರಡಿಸಿತ್ತು ಎಂದು ಹೇಳಿದರು.
ಬೀಚ್‌ಗಳಲ್ಲಿ ಕಾವಲು ಗೋಪುರಗಳನ್ನು ನಿರ್ಮಿಸುವಂತೆ ಮತ್ತು ಜೀವರಕ್ಷಕರನ್ನು ನೇಮಿಸುವಂತೆ ಉಚ್ಚ ನ್ಯಾಯಾಲಯವು ಆಗ ಸರಕಾರ ಮತ್ತು ಪೌರಸಂಸ್ಥೆಗಳಿಗೆ ಸೂಚಿಸಿತ್ತು ಎಂದ ಮಿಸ್ತ್ರಿ, ಆದರೆ ಅಧಿಕಾರಿಗಳು ಯಾವುದೇ ನಿರ್ದೇಶನಗಳನ್ನು ಪಾಲಿಸಿಲ್ಲ ಎಂದು ಬೆಟ್ಟು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News