ತುರ್ತು ಪರಿಸ್ಥಿತಿ: ಸಂವಿಧಾನಾತ್ಮಕ ಅಧಿಕಾರಕ್ಕೆ ಫ್ರಾನ್ಸ್ ಸಂಸತ್ ಅಸ್ತು

Update: 2016-02-11 03:08 GMT

ಪ್ಯಾರೀಸ್: ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಂವಿಧಾನಾತ್ಮಕ ಅಧಿಕಾರವನ್ನು ಚಲಾಯಿಸುವ ಸಂಬಂಧ ವಿವಾದಾತ್ಮಕ ಸಂವಿಧಾನ ತಿದ್ದುಪಡಿಗೆ ಫ್ರಾನ್ಸ್ ಪಾರ್ಲಿಮೆಂಟ್ ಅನುಮೋದನೆ ನೀಡಿದೆ. ಇದರ ಅನ್ವಯ ತುರ್ತು ಪರಿಸ್ಥಿತಿ ಘೋಷಣೆಗೆ ಹಾಗೂ ಶಂಕಿತ ಉಗ್ರರ ಪೌರತ್ವ ರದ್ದತಿಗೆ ಅಧಿಕಾರವಿದೆ.


ತುರ್ತು ಭದ್ರತೆ ಸ್ಥಾನಮಾನ ಕುರಿತ ತಿದ್ದುಪಡಿ ಪರವಾಗಿ 317 ಸದಸ್ಯರ ಪೈಕಿ 199 ಮಂದಿ ಮತ ಚಲಾಯಿಸಿದರೆ, ಪೌರತ್ವ ರದ್ದತಿ ಪ್ರಸ್ತಾವದ ಪರವಾಗಿ 162 ಹಾಗೂ ವಿರೋಧವಾಗಿ 148 ಮಂದಿ ಮತ ಚಲಾಯಿಸಿದರು.


ಈ ಸಂಬಂಧ ರಾಷ್ಟ್ರೀಯ ಶಾಸನಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಯಿತು ಎಂದು ಪ್ರಧಾನಿ ಮ್ಯಾನ್ಯುಯೆಲ್ ವಾಲ್ಸ್ ಹೇಳಿದ್ದಾರೆ. ಇದು ದೇಶ ಹಾಗೂ ದೇಶಾಭಿಮಾನಿಗಳನ್ನು ರಕ್ಷಿಸುವ ಉದ್ದೇಶದ ಸುಧಾರಣೆ ಎಂದು ಸಮರ್ಥಿಸಿಕೊಂಡಿದ್ದಾರೆ. ಭಯೋತ್ಪಾದನೆ ಭೀತಿ ಇರುವ ಫ್ರಾನ್ಸ್‌ಗೆ, ದೇಶದ ಪ್ರಜಾಪ್ರಭುತ್ವಕ್ಕೆ ಇದು ಒಳ್ಳೆಯ ದಿನ.


ಫ್ರಾನ್ಸ್ ಪ್ರಜೆಯ ಪೌರತ್ವವನ್ನು ರದ್ದುಪಡಿಸುವ ಅಧಿಕಾರ ನ್ಯಾಯಾಧೀಶರಿಗೆ ಇದುದ, ಇದು ಭಯೋತ್ಪಾದನಾ ಸಂಬಂಧಿ ಕೃತ್ಯಗಳಿಗಷ್ಟೇ ಅನ್ವಯಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News