ಪ್ಯಾಂಪೋರ್‌ನಲ್ಲಿ ಮುಂದುವರಿ‌ದ ಉಗ್ರರ ವಿರುದ್ಧ ಕಾರ್ಯಾಚರಣೆ; ನಾಲ್ಕು ಸೈನಿಕರು ಹುತಾತ್ಮ

Update: 2016-02-21 09:32 GMT

ಶ್ರೀನಗರ, ಫೆ.21: ಕಾಶ್ಮೀರದ  ಪ್ಯಾಂಪೋರ್‌ನಲ್ಲಿ  ಉಗ್ರರು ಮತ್ತು ಸೈನಿಕರ ನಡುವಿನ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ ನಾಲ್ಕಕ್ಕೆ ಏರಿದ್ದು, ಇಂದು ಓರ್ವ ಯೋದ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.
ಉಗ್ರರೊಂದಿಗೆ ಹೋರಾಟದಲ್ಲಿ ನಾಲ್ವರು ಯೋಧರು. ಓರ್ವ ನಾಗರಿಕ  ಬಲಿಯಾಗಿದ್ದಾರೆ. ಹದಿನಾಲ್ಕು ಸೈನಿಕರಿಗೆ ಗಾಯವಾಗಿದೆ.

ಉಗ್ರರನ್ನು ಸದೆ ಬಡಿಯಲು ಭಾರತೀಯ ಸೇನೆ ಹರಸಾಹಸ ಮಾಡುತ್ತಿದ್ದು, ಉಗ್ರರು ಅಡಗಿಕೊಂಡಿರುವ ಪ್ರದೇಶವನ್ನು ಯೋಧರು ಸುತ್ತುವರಿದಿದ್ದಾರೆ.
ಶನಿವಾರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಪ್ಯಾಂಪೋರ್‌ನಲ್ಲಿ ಪಟ್ಟಣದಲ್ಲಿ ಸಿಆರ್​ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಪರಿಣಾಮವಾಗಿ  ಇಬ್ಬರು ಯೋಧರು ಸಾವನ್ನಪ್ಪಿ 14 ಮಂದಿ ಯೋಧರು ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News