×
Ad

ಕೋವಿಡ್ ಲಸಿಕೆಯಿಂದ ಅಡ್ಡ ಪರಿಣಾಮ ಇರುವುದನ್ನು ಒಪ್ಪಿಕೊಂಡ ಔಷಧ ಉತ್ಪಾದನಾ ಸಂಸ್ಥೆ ಅಸ್ಟ್ರಾಜೆನಿಕಾ

Update: 2024-04-29 22:20 IST

ಲಂಡನ್ : ತನ್ನ ಕೋವಿಡ್ ಲಸಿಕೆಯಿಂದ ಕೆಲವು ಅಪರೂಪದ ಪ್ರಕರಣಗಳಲ್ಲಿ ಅಡ್ಡಪರಿಣಾಮ ಉಂಟಾಗಬಹುದು ಎಂದು ಬ್ರಿಟನ್-ಸ್ವೀಡನ್ ಬಹುರಾಷ್ಟ್ರೀಯ ಔಷಧ ಉತ್ಪಾದನಾ ಸಂಸ್ಥೆ ಅಸ್ಟ್ರಾಜೆನಿಕಾ ಇದೇ ಮೊದಲ ಬಾರಿ ಒಪ್ಪಿಕೊಂಡಿದೆ.

ಅಸ್ಟ್ರಾಜೆನಿಕಾದ ಕೋವಿಡ್ ಲಸಿಕೆ ಪಡೆದ ಬಳಿಕ ತನ್ನಲ್ಲಿ ಮಿದುಳು ಅಥವಾ ದೇಹದ ಇತರೆಡೆಯ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವ, ಕಡಿಮೆ ಪ್ಲೇಟ್‍ಲೆಟ್ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಕಳೆದ ವರ್ಷ ಬ್ರಿಟನ್ ನಿವಾಸಿ ಜೇಮೀ ಸ್ಕಾಟ್ ಎಂಬವರು ದೂರು ನೀಡಿದ್ದರು.

ಪ್ರಕರಣದ ವಿಚಾರಣೆ ಸಂದರ್ಭ `ತನ್ನ ಲಸಿಕೆಯಿಂದ ಅಪರೂಪದ ಪ್ರಕರಣಗಳಲ್ಲಿ ಅಡ್ಡಪರಿಣಾಮ ಟಿಟಿಎಸ್ ಉಂಟಾಗಬಹುದು. ಆದರೆ ಲಸಿಕೆ ಪಡೆಯದವರಲ್ಲೂ ಟಿಟಿಎಸ್ ಕಾಣಿಸಿಕೊಳ್ಳಬಹುದು. ಆದ್ದರಿಂದ ಈ ಕುರಿತು ವಿಸ್ತ್ರತ ಅಧ್ಯಯನದ ಅಗತ್ಯವಿದೆ ಎಂದು ಅಸ್ಟ್ರಾಜೆನಿಕಾ ಪ್ರತಿಪಾದಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News