ನಾವು ಮಹಿಷಾಸುರನ ಆರಾಧಕರು ಜಾರ್ಖಂಡ್ ಬುಡಕಟ್ಟು ಜನರ ಸಮರ್ಥನೆ

Update: 2016-02-27 18:51 GMT

ಹೊಸದಿಲ್ಲಿ, ಫೆ.27: ದುರ್ಗೆಯಿಂದ ಹತನಾದ ಮಹಿಷಾಸು ರನನ್ನು ಜೆಎನ್‌ಯು ವಿದ್ಯಾರ್ಥಿಗಳು ಹುತಾತ್ಮ ಎಂದು ಪೂಜಿಸಿ ದ್ದಾರೆ ಎಂಬ ಬಗ್ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಸಂಸತ್ತಿನಲ್ಲಿ ಆಕ್ಷೇಪಿಸಿದ ಬೆನ್ನಿಗೇ, ದೇಶದ ನೂರಾರು ಬುಡಕಟ್ಟು ಸಮುದಾಯಗಳು, ತಾವು ಮಹಿಷಾಸುರನ ಆರಾಧಕರು ಎಂದು ಹೇಳಿಕೊಂಡಿದ್ದಾರೆ.


ಮಹಿಷಾಸುರ ತಮ್ಮ ಒಡೆಯನಾಗಿದ್ದಾನೆ ಎಂದಿರುವ ಬುಡಕಟ್ಟು ಜನರು, ತಮ್ಮ ಹೃದಯದಲ್ಲಿ ಆತನನ್ನು ಇಟ್ಟು ಕೊಂಡಿದ್ದೇವೆ ಎಂದೂ ಘೋಷಿಸಿದ್ದಾರೆ. ತಾವೆಲ್ಲರೂ ಭೂಮಿ ತಾಯಿಯ ಒಡಲಿನಿಂದ ಹುಟ್ಟಿದ ವರು. ಆ ಬಗ್ಗೆ ಹೋರಾಡುವುದೇನೂ ಇಲ್ಲ. ಆದರೆ ತಾವು ಮಹಿಷಾಸುರನನ್ನು ತಮ್ಮ ದೊರೆ ಎಂದು ಪರಿಗಣಿಸುತ್ತೇವೆ. ಕುತಂತ್ರದಿಂದ ದುರ್ಗೆ ಆತನನ್ನು ಹತ್ಯೆ ಮಾಡಿದ್ದಾಳೆ. ಪಕ್ಷ ಪಾತದ ಚಿತ್ರಣವನ್ನು ಏಕೆ ನೀಡಬೇಕು? ಮಹಿಷಾಸುರನ ಮೂರ್ತಿಯನ್ನು ತಾವು ತಮ್ಮ ಹೃದಯಲ್ಲಿ ಇಟ್ಟುಕೊಂಡಿದ್ದೇವೆ ಎಂದು ಸಖುವಾಪಾನಿಯ ಸುಶ್ಮಾ ಅಸುರ್ ಹೇಳುತ್ತಾರೆ.

ಸುಶ್ಮಾ ಅಸುರ ಸಮದಾಯದವರಾಗಿದ್ದು, ಈ ಸಮುದಾ ಯವನ್ನು ಅಕೃತವಾಗಿ ಪೂರ್ವ ಬುಡಕಟ್ಟು ಗುಂಪು ಎಂದು ವರ್ಗೀಕರಿಸಲಾಗಿದೆ. ಜಾರ್ಖಂಡ್‌ನಲ್ಲಿ ಈ ಸಮುದಾಯದ 10 ಸಾವಿರ ಮಂದಿ ಇದ್ದಾರೆ. ರಾಕ್ಷಸ ರಾಜ ಎಂದು ಕರೆಯ ಲಾಗುವ ಮಹಿಷಾಸುರನನ್ನು ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶಗಳಲ್ಲಿ ಪೂಜಿಸಲಾಗುತ್ತಿದೆ.
ತಾವು ಮಹಿಷಾಸುರನ ವಂಶದವರು ಎನ್ನುವುದು ತಮ್ಮ ನಂಬಿಕೆ. ತಾವು ದುರ್ಗಾ ಪೂಜೆ ಮಾಡುವುದಿಲ್ಲ. ತಮ್ಮ ಸಂಪ್ರದಾಯ ತಲೆಮಾರುಗಳಿಂದ ನಡೆದುಕೊಂಡು ಬಂದಿದೆ. ಮಹಿಷಾಸುರ ಕೊಲ್ಲಲ್ಪಟ್ಟ ದಿನ ತಾವು ಸಾಕಷ್ಟು ಸುರಕ್ಷಾ ಕ್ರಮಗಳನ್ನು ಅನುಸರಿಸುತ್ತೇವೆ ಎಂದು ಸುಶ್ಮಾ ಹೇಳುತ್ತಾರೆ.

ನಮ್ಮ ಗುಂಪಿನವರು ಕಿವಿ ಹಾಗೂ ಮೂಗಿಗೆ ಎಣ್ಣೆ ಹಾಕಿಕೊ ಳ್ಳುತ್ತೇವೆ. ದುರ್ಗೆ ತ್ರಿಶೂಲದಿಂದ ಇರಿದಾಗ ಮಹಿಷಾಸುರನ ಆ ಜಾಗಗಳಿಂದ ರಕ್ತ ಬಂದಿತ್ತು. ಈ ಹತ್ಯೆ ರಾತ್ರೆ ನಡೆದಿದ್ದು, ಋಣಾತ್ಮಕ ಶಕ್ತಿಗಳು ತಮಗೆ ಹಾನಿ ಮಾಡಬಾರದು ಎಂಬ ಕಾರಣಕ್ಕೆ ತಾವು ಮುನ್ನೆಚ್ಚರಿಕೆ ವಹಿಸುತ್ತೇವೆ ಎಂದು ಅವರು ವಿವರಿಸುತ್ತಾರೆ.

ಮಹಿಷಾಸುರ ಮತ್ತು ದುರ್ಗೆಯ ನಡುವೆ ಯುದ್ಧ ನಡೆದ ಒಂಬತ್ತು ದಿನಗಳನ್ನು ತಾವು ಶೋಕದ ದಿನವಾಗಿ ಆಚರಿಸುತ್ತೇವೆ. ಇದು ಕೇವಲ ಅಸುರ ಸಮುದಾಯದಲ್ಲಿ ಮಾತ್ರವಲ್ಲ; ಇದೇ ಕಥೆ ಸಂತಾಲ ಸಮುದಾಯದಲ್ಲೂ ಪ್ರಚಲಿತದಲ್ಲಿದ್ದು, ರಾವಣ ಹಾಗೂ ಮಹಿಷಾಸುರರ ಸಾವಿಗೆ ಅವರು ಶೋಕವನ್ನು ಇಂದಿಗೂ ಆಚರಿಸುತ್ತಾರೆ ಎಂದು ಬುಡಕಟ್ಟು ಸಮುದಾಯಗಳ ಸಾಹಿತ್ಯ, ಇತಿಹಾಸ ಹಾಗೂ ಪರಂಪರೆಯನ್ನು ಸಂರಕ್ಷಿಸುವ ಕಾರ್ಯ ಮಾಡುತ್ತಿರುವ ವಂದನಾ ತೇತೆ ಎಂಬವರು ಹೇಳುತ್ತಾರೆ.

ದುರ್ಗೆಯನ್ನು ಬುಡಕಟ್ಟು ಜನಾಂಗದ ಜಾನಪದದಲ್ಲಿ ಕೆಟ್ಟದಾಗಿ ಬಿಂಬಿಸಲಾಗಿದೆ ಎಂಬ ಬಗ್ಗೆ ಗಮನ ಸೆಳೆದಾಗ, ಪಶ್ಚಿಮ ಬಂಗಾಳದಲ್ಲಿ ಪರಾಮರ್ಶೆ ನಡೆಸಿದಾಗ, ಹಲವು ಸಮುದಾಯಗಳ ಮಂದಿ ಭಾಗವಹಿಸಿದ್ದರು. ಅವರ ಜಾನಪದ ಗೀತೆಗಳಲ್ಲಿ ಇದೇ ಚಿತ್ರಣ ಇದೆ. ಆದರೆ ಆ ಬಗ್ಗೆ ಅಕೃತ ಘೋಷಣೆ ಮಾಡುವ ಮುನ್ನ ಆಳವಾದ ಅಧ್ಯಯನ ಮಾಡಬೇಕಿದೆ ಎಂದು ಪಶ್ಚಿಮ ಬಂಗಾಳದ ಪುರುಲಿಯಾದ ಅಜಿತ್ ಪ್ರಸಾದ್ ಹೇಂಬ್ರಮ್ ತಿಳಿಸಿದರು. ರಿಂದ ರಾಜ್ಯದಲ್ಲಿ ಮಹಿಷಾಸುರನ ಪುಣ್ಯತಿಥಿ ಸಂಘಟಿಸುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದರು. ಈ ವಿಷಯದ ಬಗ್ಗೆ ಈಗಿನ ಸರಕಾರ ಏಕೆ ಅಷ್ಟು ತಲೆ ಕೆಡಿಸಿಕೊಂಡಿದೆ ಎನ್ನುವುದು ಗೊತ್ತಿಲ್ಲ. ಒಂದು ವಿವರಣೆಯ ಬಗ್ಗೆ ಮಾತ್ರ ಅವರು ಗಮನ ಹರಿಸಿದ್ದಾರೆ. ಬುಡಕಟ್ಟು ಜನಾಂಗದವರೂ ಈ ಮಣ್ಣಿನ ಮಕ್ಕಳು. ತಲೆಮಾರುಗಳಿಂದ ಅವರ ಸಂಪ್ರದಾಯಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಹೇಂಬ್ರಮ್ ಆಕ್ಷೇಪಿಸಿದರು.ಾರ್ಖಂಡ್ ಭಾಷಾ ಸಂಸ್ಕೃತಿ ಸಾಹಿತ್ಯ ಅಖಾರಾದ ಅಶ್ವಿನಿ ಪಂಕಜ್ ಎಂಬವರು ಹೇಳುವಂತೆ, ಸಮಸ್ಯೆ ಎಂದರೆ ಇದನ್ನು ತಿಳಿದುಕೊಳ್ಳುವ ಆಸಕ್ತಿ ಯಾರಿಗೂ ಇಲ್ಲ ಅಥವಾ ಬುಡಕಟ್ಟು ಸಂಪ್ರದಾಯ ಸಂರಕ್ಷಿಸಲು ಯಾರೂ ಸಿದ್ಧರಿಲ್ಲ. ಆದುದ್ದರಿಂದ ಅದು ವೇಗವಾಗಿ ನಶಿಸುತ್ತಿದೆ. ಅವರ ಸಂಪ್ರದಾಯ, ವಿವಿಧಾನಗಳು ಹಾಗೂ ಜಾನಪದ ನಾಶವಾಗುತ್ತಿವೆ. ಅದನ್ನು ದಾಖಲಿಸಿ, ಗುರುತಿಸುವ ಕಾರ್ಯ ಆಗಬೇಕು ಎಂದವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News