ಅಭಿವ್ಯಕ್ತಿ ಸ್ವಾತಂತ್ರವೆಂದರೆ ವೌನವಾಗಿರುವ ಹಕ್ಕು: ಶಾರುಕ್

Update: 2016-03-01 18:32 GMT

ಮುಂಬೈ, ಮಾ.1: ಅಭಿವ್ಯಕ್ತಿ ಸ್ವಾತಂತ್ರ ಎಂಬುದಕ್ಕೆ ವೌನವಾಗಿರುವ ಹಕ್ಕು ಎಂಬ ಅರ್ಥವೂ ಇದೆಯೆಂದು ನಟ ಶಾರುಕ್ ಖಾನ್ ಸೋಮವಾರ ಹೇಳಿದ್ದಾರೆ.

ಕಳೆದ ವರ್ಷ ಅಸಹಿಷ್ಣುತೆಯ ಕುರಿತಾದ ಅವರ ಹೇಳಿಕೆ ರಾಜಕೀಯ ಬಿರುಗಾಳಿಯೆಬ್ಬಿಸಿತ್ತು.

ಅವರ ಮುಂದಿನ ಚಿತ್ರ ‘ಫ್ಯಾನ್’ ನ ಟ್ರೈಲರ್‌ಬಿಡುಗಡೆಯ ವೇಳೆ ಖಾನ್, ಮುಂಬೈಯಲ್ಲಿ ಮಾತನಾಡುತ್ತಿದ್ದರು.

ಅಸಹಿಷ್ಣುತೆಯ ಕುರಿತು ಹೇಳಿಕೆಯ ಬಳಿಕದ ಅವರ ಅನುಭವಗಳ ಬಗ್ಗೆ ಪ್ರಶ್ನಿಸಿದಾಗ, ಕೆಕೆಆರ್ ವಿರುದ್ಧ ಮುಂಬೈ ಇಂಡಿಯನ್ಸ್‌ನ ಪಂದ್ಯವನ್ನು ನೋಡುತ್ತಿದ್ದಾಗ ತಾನು ಮಾಡುವ ಏಕೈಕ ಅಪೀಲ್, ‘ಔಟ್’ ಎಂದು. ತಾನಿದರಲ್ಲಿ ಸೇರ ಬಯಸುವುದಿಲ್ಲ. ಅಭಿವ್ಯಕ್ತಿ ಸ್ವಾತಂತ್ರವೆಂದರೆ ವೌನವಾಗಿರುವ ಹಕ್ಕು ಎಂದೂ ಅರ್ಥ. ತಾನು ಈ ಬಗ್ಗೆ ಅತ್ಯಂತ ವೌನಿಯಾಗಿದ್ದೇನೆಂದು ಶಾರುಕ್ ಉತ್ತರಿಸಿದರು.

ಕಳೆದ ವರ್ಷ ನವೆಂಬರ್‌ನಲ್ಲಿ ತನ್ನ 50ನೆ ಹುಟ್ಟುಹಬ್ಬದ ವೇಳೆ, ದೇಶದಲ್ಲಿ ಭಾರೀ ಅಸಹಿಷ್ಣುತೆ ಇದೆ. ಅದು ಬೆಳೆಯುತ್ತಿದೆ ಎಂದು ಖಾನ್ ಹೇಳಿಕೆ ನೀಡಿದ್ದರು.

ಆ ಹೇಳಿಕೆ ವಿವಾದವನ್ನೆಬ್ಬಿಸಿದ್ದು, ಅನೇಕ ಬಿಜೆಪಿ ಸದಸ್ಯರು ಅವರನ್ನು ಟೀಕಿಸಿದ್ದರು.

ಖಾನ್‌ರ ‘ದಿಲ್‌ವಾಲೆ’ ಚಿತ್ರವೂ ದೇಶದ ಅನೇಕ ಕಡೆ ವಿರೋಧವನ್ನು ಎದುರಿಸ ಬೇಕಾಯಿತು.

ಆದರೆ, ಭಾರತವು ಅಸಹಿಷ್ಣು ದೇಶವೆಂದು ತಾನು ಹೇಳಿಯೇ ಇಲ್ಲ. ತನ್ನ ಮಾತನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆಯೆಂದು ಬಳಿಕ ಅವರು ತಿಪ್ಪರಲಾಗ ಹೊಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News