ತನ್ನ ಪತ್ನಿ ಆರೆಸ್ಸೆಸ್‌ಗೆ ಪ್ಯಾಂಟ್ ಹಾಕಿಸಿದ್ದಾರೆ, ನಾನು ಪುನಃ ಚಡ್ಡಿ ಹಾಕಿಸುವೆ: ಲಾಲುಪ್ರಸಾದ್ ಯಾದವ್

Update: 2016-03-15 08:25 GMT

ಪಾಟ್ನಾ, ಮಾರ್ಚ್.15: ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಆರೆಸ್ಸೆಸ್ ಡ್ರೆಸ್ ಕೋಡ್ ಬದಲಾಯಿಸಿದ ಶ್ರೇಯವನ್ನು ತನ್ನ ಪತ್ನಿ ರಾಬರಿ ದೇವಿಗೆ ನೀಡಿದ್ದಾರೆ. ಕಳೆದ ಜನವರಿಯಲ್ಲಿ ಮಾಜಿಮುಖ್ಯಮಂತ್ರಿ ರಾಬರಿ ದೇವಿ ಆರೆಸ್ಸೆಸ್‌ಗೆ ಹಿರಿಯ ವ್ಯಕ್ತಿಗಳಿಗೆ ಸಾರ್ವಜನಿಕ ಸ್ಥಳದಲ್ಲಿ ಚಡ್ಡಿ ಹಾಕಿಸಲು ನಾಚಿಕೆ ಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದರು. ಅಂದು ರಾಬರಿ ದೇವಿಯ ಹೇಳಿಕೆಯನ್ನು ಕೇಂದ್ರ ಸಚಿವರ ಸಹಿತ ಹಲವಾರು ಬಿಜೆಪಿ ಪ್ರಮುಖರು ಟೀಕಿಸಿದ್ದರು.

ಲಾಲು ಪ್ರಸಾದ್ ಯಾದವ್ ಟ್ವೀಟ್ ಮಾಡಿ ರಾಬರಿ ಆರೆಸ್ಸೆಸಸ್ ತನ್ನ ಉಡುಪು ಬದಲಾಯಿಸುವಂತೆ ಒತ್ತಡ ಹೇರಿದ್ದರು. ಈಗ ಅದು ತನ್ನ ಚಡ್ಡಿಯ ಬದಲಾಗಿ ಫುಲ್ ಪ್ಯಾಂಟ್ ಹಾಕುತ್ತಿದೆ ಎಂದು ಹೇಳಿದ್ದಾರೆ.

ಆದರೆ ನಾನು ಆರೆಸ್ಸೆಸ್‌ನ್ನು ಪುನಃ ಚಡ್ಡಿ ಹಾಕುವಂತೆ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ. ಅವರ ಪ್ರಕಾರ ಎರಡು ತಿಂಗಳ ಹಿಂದೆ ತನ್ನ ಪತ್ನಿ ಆರೆಸ್ಸೆಸ್‌ನ್ನು ಪ್ರಶ್ನಿಸಿದ್ದು ಅದಕ್ಕೆ ಮುಜುಗರ ಉಂಟಾಗಿತ್ತು. ಆದ್ದರಿಂದ ಅವರು ತಮ್ಮ ಉಡುಪು ವಿಧಾನವನ್ನು ಬದಲಾಯಿಸಿದ್ದಾರೆ. ಈಗ ಪುನಃ ಅವರು ಚಡ್ಡಿ ಧರಿಸುವಂತೆ ನಾನೇ ಮಾಡುವೆ ಎಂದು ಅವರು ಕುಟುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News