×
Ad

ಆ್ಯಪಲ್ iPhone SE ಟಾಪ್ ಫೀಚರ್‌ಗಳು ಇಲ್ಲಿವೆ ನೋಡಿ

Update: 2016-03-22 17:52 IST

ಆ್ಯಪಲ್ ತನ್ನಬಹು ನಿರೀಕ್ಷೆಯ ಐಫೋನ್ ಎಸ್‌ಇಬಿಡುಗಡೆ ಮಾಡಿದ್ದುಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಐಫೋನ್‌ಗಳಲ್ಲಿಯೇ ಅತ್ಯಂತದ ಅಗ್ಗದ ಐಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕುಗ್ಗುತ್ತಿರುವ ಫೋನ್ ಮಾರಾಟದ ಹಿನ್ನೆಲೆಯಲ್ಲಿ ಈ ಹೊಸ ಐಫೋನ್ ಎಸ್‌ಇ ಬಿಡುಗಡೆಗೊಳಿಸಿರುವ ಕಂಪೆನಿ ಅಭಿವೃದ್ಧಿಹೊಂದುತ್ತಿರುವ ಮಾರುಕಟ್ಟೆಗಳು ಹಾಗೂ ಸಣ್ಣ ಫೋನ್ ಹೊಂದಬಯಸುವ ಗ್ರಾಹಕರ ಮೇಲೆ ತನ್ನ ಕಣ್ಣು ನೆಟ್ಟಿದೆ. ಈ ಹೊಸ ಫೋನಿನ ಪ್ರಮುಖ 10 ಫೀಚರ್‌ಗಳು ಇಲ್ಲಿವೆ ಓದಿ.

* ಐಫೋನ್ ಎಸ್‌ಇ ಒಂದು ಶಕ್ತಿಶಾಲಿ ಸ್ಮಾರ್ಟ್‌ಫೋನ್ ಆಗಲು ಕಾರಣ ಅದರಲ್ಲಿರುವ ಐಫೋನ್ 6ಎಸ್ ಹಾಗೂ 6ಎಸ್ ಪ್ಲಸ್‌ನಲ್ಲಿರುವಂತಹುದೇ ಚಿಪ್‌ಸೆಟ್. ಈ ಚಿಪ್‌ಸೆಟ್‌ನಲ್ಲಿದೆ1.8GHzಡುಯೆಲ್ ಕೋರ್ ಪ್ರೊಸೆಸರ್ ಹಾಗೂ 2ಜಿಬಿ ರ್ಯಾಮ್.

* ಐಫೋನ್ ಎಸ್‌ಇ ಪ್ರಿಲೋಡೆಡ್ಐಓಎಸ್ 9.3 ಜತೆಬರುತ್ತಿದ್ದರೂ,ಆ್ಯಪಲ್ ಈ ಫೋನಿಗೆ ಕನಿಷ್ಠ ಮೂರು ಹೆಚ್ಚುವರಿ ಐಓಎಸ್ ಅಪ್‌ಡೇಟ್ ನೀಡಲಿದೆ. ಇದು ಅಪ್‌ಡೇಟ್‌ಗಳ ಆಧಾರದಲ್ಲಿಅದನ್ನು ಐಫೋನ್ 6ಎಸ್‌ಗೆ ಸರಿಸಾಟಿಯಾಗಿಸುತ್ತದೆ ಹಾಗೂ ಐಫೋನ್ 6 ಹಾಗೂ 5ಎಸ್‌ಗಿಂತ ಒಂದು ಹೆಜ್ಜೆ ಮುಂದಿರುವಂತೆ ಮಾಡಿದೆ.

* ಈ ಹೊಸ ಸ್ಮಾರ್ಟ್‌ಫೋನ್ 12 ಎಂಪಿ ಐಸೈಟ್ ಕ್ಯಾಮರಾ ಹಾಗೂ ಡುಯೆಲ್ಎಲ್‌ಇಡಿ ಹಾಗೂ ಹಿಂದೆ ಟೂ-ಟೋನ್ ಫ್ಲ್ಯಾಶ್‌ದೊಂದಿಗೆ ಬರುತ್ತದೆ. ಪ್ರೈಮರಿ ಕ್ಯಾಮರಾವು ಫೋಕಸ್ ಪಿಕ್ಸೆಲ್ ಆಟೋಫೋಕಸ್, ಆಟೋ ಹೆಚ್‌ಡಿಆರ್ ಇಮೇಜ್, 4ಕೆ ವೀಡಿಯೊ ರೆಕಾರ್ಡಿಂಗ್, ಟೈಮ್ ಲ್ಯಾಪ್ಸ್ ಹಾಗೂ ಸ್ಲೋ ಮೋಶನ್ ವೀಡಿಯೋಸ್ ಹೊಂದಿದೆಯಲ್ಲದೆ ಹಲವಾರು ಇಮೇಜ್‌ಗಳನ್ನು ಜತೆಯಾಗಿಸಿ 63ಎಂಪಿ ರೆಸೊಲ್ಯೂಶನ್ನಿನ ಚಿತ್ರವನ್ನು ನೀಡುವುದು. 4ಕೆ ವೀಡಿಯೊ ರೆಕಾರ್ಡಿಂಗ್ ಸಮಯದಲ್ಲಿ 8 ಎಂಪಿ ರೆಸೊಲ್ಯೂಶನ್ ಚಿತ್ರಗಳನ್ನು ತೆಗೆಯಲೂ ಸಹಕಾರಿಯಾಗಿದೆ.

* ಕೈಗೆಟಕುವ ದರದಲ್ಲಿರುವ ಸ್ಮಾರ್ಟ್‌ಫೋನ್ ಪಡೆಯಲಿಚ್ಛಿಸುವವರು ಈ ಟಾಪ್-ಎಂಡ್ ಫೀಚರ್ ಇರುವ ಫೋನನ್ನು $399, ಅಂದಾಜು ರೂ 26,000ಗೆ ತಮ್ಮದಾಗಿಸಿಕೊಳ್ಳಬಹುದು.

*ಐಫೋನ್ ಎಸ್‌ಇ ಉಪಯೋಗಿಸಿ ಲೈವ್ ಫೊಟೋಗಳನ್ನು ಕ್ಲಿಕ್ಕಿಸಬಹುದು.ಫೊಟೋಗಳನ್ನು ಸಣ್ಣ ವೀಡಿಯೊ ಕ್ಲಿಪ್ ಆಗಿ ಕೂಡ ಪರಿವರ್ತಿಸಬಹುದಾಗಿದೆ. ಈ ಲೈವ್ ಫೊಟೋಗಳನ್ನು ಗ್ಯಾಲರಿಯಲ್ಲಿ ನೋಡಬಹುದು ಅಥವಾ ಲಾಕ್‌ಸ್ಕ್ರೀನ್‌ನಲ್ಲಿ ವಾಲ್ ಪೇಪರ್ ಆಗಿ ಅಥವಾ ಫೇಸ್ಬುಕ್ಕಿನಲ್ಲಿ ಕೂಡ ಅಪ್‌ಲೋಡ್ ಮಾಡಬಹುದು.

* ಆ್ಯಪಲ್‌ನ ಡಿಜಿಟಲ್ ಅಸಿಸ್ಟೆಂಟ್ ಹೇ ಸಿರಿಯನ್ನು ಫೋನ್ ಹೊಂದಿರುವವರು ಯಾವಾಗ ಬೇಕಾದರೂ ಕರೆದು ಅವರ ಸಹಾಯ ಪಡೆಯಬಹುದು. ಅವರು ಮಾಡಬೇಕಾದ್ದಿಷ್ಟೆ. ಯಾವುದೇ ಬಟನ್ ಒತ್ತಿ ಹೇ ಸಿರಿ ಎಂದು ಜೋರಾಗಿ ಕರೆಯಬೇಕು.

*ಐಫೋನ್ ಎಸ್‌ಇಯ ಸ್ಕ್ರೀನ್ ಸೈಜ್4 ಇಂಚು ಆಗಿದ್ದು 1136x 640  ರೆಸೊಲ್ಯುಶನ್ ಹೊಂದಿದ್ದು ಪಿಕ್ಸೆಲ್ ಡೆನ್ಸಿಟಿ 326ಪಿಪಿಐ ಆಗಿದೆ. ಇದನ್ನು ರೆಟಿನಾ ಡಿಸ್ಪ್ಲೇ ಎನ್ನಲಾಗುತ್ತದೆ.

*ಐಫೋನ್ ಎಸ್‌ಇ ಹೆಲ್ತ್ ಆ್ಯಪ್ ಕೂಡ ಹೊಂದಿದೆ. ಫೋನ್ ಬಳಕೆದಾರರು ಎಷ್ಟು ಹೆಜ್ಜೆ ನಡೆದಾಡಿದ್ದಾರೆಂದು, ಎಷ್ಟು ದೂರ ಓಡಿದ್ದಾರೆ ಹಾಗೂ ಎಷ್ಟು ಮೆಟ್ಟಿಲು ಹತ್ತಿದ್ದಾರೆಂಬ ಮಾಹಿತಿ ಅದು ನೀಡುವುದು.

* ಈ ಫೋನ್ ಮಾಡೆಲ್ 32 ಜಿಬಿ ಹಾಗೂ 128 ಜಿಬಿ ಸಾಮರ್ಥ್ಯದಲ್ಲೂ ಲಭ್ಯವಿದೆ ಹಾಗೂ7.9 ಇಂಚು ಐ-ಪ್ಯಾಡ್ ಪ್ರೋ ಬೆಲೆ $599 ಹಾಗೂ $749 ಆಗಿದೆ. ಆದರೆ ಈ ಫೋನ್‌ಗಳ ಚಿತ್ರವನ್ನು ಕಂಪೆನಿ ಬಿಡುಗಡೆ ಮಾಡಿಲ್ಲ.

* ಐಪ್ಯಾಡ್ ಪ್ರೋದ ಇನ್ನೊಂದು ಪ್ರಮುಖ ಫೀಚರ್ ಟಚ್ ಐಡಿ ಫಿಂಗರ್ ಪ್ರಿಂಟ್ ಸೆನ್ಸರ್, 10 ಗಂಟೆ ಬ್ಯಾಟರಿ ಲೈಫ್ ಹಾಗೂ ನಾಲ್ಕು ಸ್ಪೀಕರ್‌ಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News