ಮತ್ತೆ ಜಗತ್ತಿನ ಟಾಪ್ 20ರಲ್ಲಿ ಸ್ಥಾನ ಪಡೆದ ಭಾರತದ ವಿಶ್ವವಿದ್ಯಾನಿಲಯ
Update: 2016-03-23 11:25 IST
ಕಳೆದ ಬಾರಿಗಿಂತ ಒಂದು ಸ್ಥಾನ ಕುಸಿದರೂ, ವಿಶ್ವದ ಅಗ್ರ 20 ಅಭಿವೃದ್ಧಿ ಅಧ್ಯಯನ ಸಂಸ್ಥೆಗಳ ಪೈಕಿ ದಿಲ್ಲಿ ವಿಶ್ವವಿದ್ಯಾನಿಲಯ ಸ್ಥಾನ ಪಡೆದಿದೆ.
ಅಭಿವೃದ್ಧಿ ಅಧ್ಯಯನದ ಅತ್ಯುನ್ನತ ಸಂಸ್ಥೆಗಳಲ್ಲಿ ದಿಲ್ಲಿಗೆ 18ನೇ ರ್ಯಾಂಕ್. ವಿಷಯ ಆಧರಿತ ಅಧ್ಯಯನ ಸಂಸ್ಥೆಗಳಿಗೆ ರ್ಯಾಂಕಿಂಗ್ ನೀಡುತ್ತಿರುವುದು ಇದು ಆರನೇ ಬಾರಿ. ಅದಾಗ್ಯೂ ಐಐಟಿ ರ್ಯಾಂಕಿಂಗ್ ಪಟ್ಟಿಯಲ್ಲಿ ಅತಿಹೆಚ್ಚು ಬಾರಿ ಕಾಣಿಸಿಕೊಂಡ ಸಂಸ್ಥೆಯಾಗಿ ಮುಂದುವರಿದಿದೆ. ಐಐಟಿ ಮುಂಬೈ, 14 ಬಾರಿ ರ್ಯಾಂಕಿಂಗ್ ಪಟ್ಟಿಯಲ್ಲಿದ್ದು, ಏಳು ಬಾರಿ ಅಗ್ರ 100ರಲ್ಲಿ ಕಾಣಿಸಿಕೊಂಡಿದೆ.
77 ಸಾವಿರ ಶಿಕ್ಷಣ ತಜ್ಞರ ಅಭಿಪ್ರಾಯ, 45 ಸಾವಿರ ಸಿಬ್ಬಂದಿಯ ಅನಿಸಿಕೆ, 28.5 ದಶಲಕ್ಷ ಸಂಶೋಧನಾ ಪ್ರಬಂಧಗಳ ವಿಶ್ಲೇಷಣೆಗಳನ್ನು ಕ್ರೋಢೀಕರಿಸಿ ಈ ರ್ಯಾಂಕಿಂಗ್ ನೀಡಲಾಗುತ್ತದೆ. ಭಾರತದ 21 ವಿಶ್ವವಿದ್ಯಾನಿಲಯಗಳು ಒಂದಲ್ಲ ಒಂದು ವಿಷಯದಲ್ಲಿ ರ್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.